ಕಾಗವಾಡ ಪಟ್ಟಣದ ಐಸಿಐಸಿಐ ಬ್ಯಾಂಕಿನಿಂದ ಕೃಷ್ಣ ನದಿಯವರೆಗೆ ಹೋಗುವ ರಸ್ತೆ ಹದಗೆಟ್ಟಿದ್ದರಿಂದ ತಹಶೀಲ್ದಾರರನ್ನು ಸ್ಥಳಕ್ಕೆ ಕರೆದು ಒಯದ ರೈತರು.
ನಿರಂತರವಾಗಿ ಸುರಿದ ಮಳೆಯಿಂದ ಆನೇಕ ರಸ್ತೆಗಳು ಹದಗೆಟ್ಟು ಹೋಗಿವೆ ಆದರೊಂದಿಗೆ ಕಾಗವಾಡ ಪಟ್ಟಣದ ಐಸಿಐಸಿಐ ಬ್ಯಾಂಕಿನಿಂದ ಹಿಡಿದು ಕಲಕೇರಿ ಕೆರಿ ಮುಖಾಂತರ ಕೃμÁ್ಣ ನದಿಯವರೆಗೆ ಸಂಪರ್ಕಿಸುವ ರಸ್ತೆ ಹದಿಗೆಟ್ಟು ಹೋಗಿದ್ದು,
ಅನೇಕ ರೈತರಿಗೆ ಸಂಚಾರಿಸಲು ಸಾಧ್ಯವಾಗದೇ ಇದ್ದಿದ್ದರಿಂದ ರೈತರು ಒಂದುಗೂಡಿ ಕಾಗವಾಡ ತಹಸಿಲ್ದಾರ್ ರಾಜೇಶ್ ಬುರ್ಲಿ ಹಾಗೂ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿ ಕೆ.ಕೆ.ಗಾವಡೆ ಇವರನ್ನು ಸ್ಥಳಕ್ಕೆ ಕರೆದೊಯ್ದು ಇಲ್ಲಿ ಗತಿ ಕನ್ನಾರೆ ನೋಡುವಂತೆ ಮಾಡಿದರು.
ಶನಿವಾರ ರಂದು ರೈತ ಮುಖಂಡರಾದ ಅರುಣ ಕರವ, ಸುರೇಶ ಜಗನಾಡೆ, ಅಭಿಷೇಕ ಕ್ಷೀರಸಾಗರ, ರೇವಣ್ಣಾ ಕೋಳೆಕರ, ಗಣೇಶ ಕೋಳೆಕರ, ಮಹಾದೇವ ಕೋಳೆಕರ, ಸತ್ಯಗೌಡಾ ಪಾಟೀಲ, ಡಾ. ಅನೀಲ ಪಾಟೀಲ, ಡಾ. ಶರದ ಪವಾರ, ರಾವಸಾಬ ಪಾಟೀಲ, ಅಮೋಲ ದೇವತಾಳೆ, ಸೇರಿದಂತೆ ಅನೇಕ ರೈತರು ರೂಚ್ಚಿಗೆಯದ್ದು ಇಲ್ಲಿಯ ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು, ಮಹಿಳೆಯರಿಗೆ ಪಟ್ಟಣಕ್ಕೆ ಹೋಗಿ ಬರಲು, ಅಸಾಧ್ಯವಿದೆ ಎಂದು ಹೇಳಿದರು.
ಈ ಕೆಸರಿನಲ್ಲಿ ಪ್ರತಿ ದಿನ ಹತ್ತಾರು ಬೈಕ್ ಸವಾರಿಗಳು ಹುರುಳಿ ಬೀಳುವ ಘಟನೆಗಳು ನಡೆಯುತ್ತಿವೆ ಎಂದು ಹೇಳಿ, ಇದೇ ಮಾರ್ಗವಾಗಿ ಇಲ್ಲಯ ಸ್ಟೋನ್ ಕ್ರೇಸಿಯರ ವಾಹನಗಳು ಸಾಗಾಟವಾಗುತ್ತಿದ್ದರಿಂದ ರಸ್ತೆ ಹದಿಗೆಡಲು ಮುಖ್ಯ ಕಾರಣವಾಗಿದೆ ಎಂದು ಹೇಳಿ, ನಮಗೆ ರಸ್ತೆ ನಿರ್ಮಿಸಿಕೊಡಿರಿ ಎಂದು ಕೇಳಿಕೊಂಡರು.
ಸ್ಥಳಕ್ಕೆ ಆಗಮಿಸಿದ ತಹಶಿಲ್ದಾರ ರಾಜೇಶ ಬುರ್ಲಿ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಇವರು ಅಧಿಕ ಮಳೆಯಿಂದ ಮತ್ತು ಭಾರ ವಾಹನಗಳು ಸಂಚಾರಿಸುತ್ತಿರುವದಿಂದ ರಸ್ತೆ ಹದಗೆಟ್ಟಿದೆ ಶಿಘ್ರದಲ್ಲಿ ಕಾಗವಾಡ ಶಾಸಕ ರಾಜು ಕಾಗೆ ಇವರ ಗಮನಕ್ಕೆ ತಂದು ರಸ್ತೆ ನಿರ್ಮಿಸುವ ಭರವಸೆ ನೀಡಿದರು. ಸ್ಟೋನ್ ಕ್ರೇಸಿಯರ ಮಾಲಿಕರಿಗೆ ತಾತ್ಕಾಲಿಕವಾಗಿ ರಸ್ತೆ ಸುಧಾರಣೆ ಮಾಡಲು ಸೂಚನೆ ನೀಡಿದರು.
Laxmi News 24×7