ದಾವಣಗೆರೆ: ಜಿಲ್ಲಾ ವಾಲ್ಮೀಕಿ ಯುವಕರ ಸಂಘವು ವಾಲ್ಮೀಕಿ ಜಯಂತಿಯ ಮುನ್ನಾ ದಿನವಾದ ಬುಧವಾರ ನಗರದಲ್ಲಿ ಬೈಕ್ ರ‍್ಯಾಲಿ ನಡೆಸಿತು. ಪ್ರಮುಖ ರಸ್ತೆಯಲ್ಲಿ ಸಂಚರಿಸಿ ವಾಲ್ಮೀಕಿ ಸಂದೇಶ ರವಾನಿಸುವ ಪ್ರಯತ್ನ ಮಾಡಿತು.
ಸೋನೆ ಮಳೆಯ ನಡುವೆಯೂ ಹೊಂಡದ ವೃತ್ತದಲ್ಲಿ ಜಮಾಯಿಸಿದ ಯುವಕರು ತಲೆಗೆ ಪೇಟ ಧರಿಸಿ, ಬಾವುಟ ಹಿಡಿದ್ದರು.
ಪಟಾಕಿ ಸಿಡಿಸಿ ಸಂಭ್ರಮಿಸಿದರು. ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಅವರು ವೀರ ಮದಕರಿ ನಾಯಕ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಬೈಕ್ ರ‍್ಯಾಲಿಗೆ ಚಾಲನೆ ನೀಡಿದರು.
‘ಬದುಕು ಪರಿವರ್ತನೆ ಮಾಡಿಕೊಂಡ ಮಹರ್ಷಿ ವಾಲ್ಮೀಕಿ ದೊಡ್ಡ ಸಾಧಕರಾದರು. ರಾಮಾಯಣದಂತಹ ಗ್ರಂಥವನ್ನು ರಚಿಸಿದರು. ಅವರಿಗೆ ಗೌರವ ಸಲ್ಲಿಸಲು ಜಯಂತಿಯನ್ನು ಸರ್ಕಾರವೇ ಆಚರಿಸುತ್ತಿರುವುದು ಹರ್ಷದಾಯಕ ಸಂಗತಿ’ ಎಂದು ಪ್ರಸನ್ನಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
Laxmi News 24×7