Breaking News

ವರಾತ್ರಿ ಅಂಗವಾಗಿ ಸವದತ್ತಿ ತಾಲ್ಲೂಕಿನ ಯಲ್ಲಮ್ಮನಗುಡ್ಡ ಮತ್ತು ರಾಯಬಾಗ ತಾಲ್ಲೂಕಿನ ಚಿಂಚಲಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಭೇಟಿ ನೀಡಿದ ಭಕ್ತರು, 22 ಸಾವಿರ ಕೆ.ಜಿಗೂ ಹೆಚ್ಚಿನ ಪ್ರಮಾಣದ ಎಣ್ಣೆಯನ್ನು ದೀಪಕ್ಕೆ ಹಾಕಿ, ಭಕ್ತಿ ಸಮರ್ಪಿಸಿದ್ದಾರೆ.

Spread the love

ಬೆಳಗಾವಿ: ಈ ವರ್ಷ ಗಾಣದ ಎಣ್ಣೆ ದರ ದುಬಾರಿಯಾದರೂ ಭಕ್ತರ ಭಕ್ತಿ ಕುಂದಿಲ್ಲ. ನವರಾತ್ರಿ ಅಂಗವಾಗಿ ಸವದತ್ತಿ ತಾಲ್ಲೂಕಿನ ಯಲ್ಲಮ್ಮನಗುಡ್ಡ ಮತ್ತು ರಾಯಬಾಗ ತಾಲ್ಲೂಕಿನ ಚಿಂಚಲಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಭೇಟಿ ನೀಡಿದ ಭಕ್ತರು, 22 ಸಾವಿರ ಕೆ.ಜಿಗೂ ಹೆಚ್ಚಿನ ಪ್ರಮಾಣದ ಎಣ್ಣೆಯನ್ನು ದೀಪಕ್ಕೆ ಹಾಕಿ, ಭಕ್ತಿ ಸಮರ್ಪಿಸಿದ್ದಾರೆ.

 

ನವರಾತ್ರಿ ವೇಳೆ ಎರಡೂ ದೇವಾಲಯಗಳಲ್ಲಿ ದೀಪಗಳಿಗೆ ಎಣ್ಣೆ ಹಾಕುವ ಸಂಪ್ರದಾಯವಿದೆ. ಕಳೆದ ವರ್ಷ ಎಣ್ಣೆ ದರ ಕೆ.ಜಿಗೆ ₹ 105 ರಿಂದ ₹ 110 ಇತ್ತು. ಈ ವರ್ಷ ₹140 ರಿಂದ ₹150ಕ್ಕೆ ಏರಿದೆ. ಎಣ್ಣೆ ಸಂಗ್ರಹಣೆಯೂ ಹೆಚ್ಚಿದೆ.

16,200 ಕೆ.ಜಿ ಸಂಗ್ರಹ: ಯಲ್ಲಮ್ಮನಗುಡ್ಡದ ರೇಣುಕಾ ಯಲ್ಲಮ್ಮ ದೇವಿ ದೇವಾಲಯದಲ್ಲಿ ಗರ್ಭಗುಡಿ ಎದುರೇ ಅಳವಡಿಸಿರುವ ದೀಪಕ್ಕೆ ಭಕ್ತರು ಹಾಕುವ ಎಣ್ಣೆ, ಪಕ್ಕದಲ್ಲೇ ಇರಿಸಿದ ಟ್ಯಾಂಕ್‌ ಸೇರುತ್ತದೆ. ಅಲ್ಲಿಂದ ಮೋಟರ್‌ನಿಂದ ಟ್ಯಾಂಕರ್‌ಗೆ ತುಂಬಿಸಲಾಗುತ್ತಿದೆ. ಮಿಶ್ರಣವಾದ ಈ ಎಣ್ಣೆಯನ್ನು ಬೇರ್ಪಡಿಸಿ ಮಾರಲು ಆಗುವುದಿಲ್ಲ. ಅದಕ್ಕೆ ಮಾರುಕಟ್ಟೆಗಿಂತ ಕಡಿಮೆ ದರಕ್ಕೆ ಕೆಲವರು ಖರೀದಿಸುತ್ತಾರೆ.

‘ಕಳೆದ ವರ್ಷ ನವರಾತ್ರಿಯಲ್ಲಿ ಈ ದೇವಾಲಯದಲ್ಲಿ 14,194 ಕೆ.ಜಿ ಎಣ್ಣೆ ಸಂಗ್ರಹವಾಗಿತ್ತು. ಕೆ.ಜಿಗೆ ₹ 51 ದರದಲ್ಲಿ ದೇವಾಲಯದವರು ಮಾರಾಟ ಮಾಡಿದ್ದರು. ಈ ಸಲ 16,200 ಕೆ.ಜಿ ಎಣ್ಣೆ ಸಂಗ್ರಹವಾಗಿದೆ. ಕೆ.ಜಿಗೆ ₹58 ದರದಲ್ಲಿ ಎಣ್ಣೆ ಮಾರಾಟ ಮಾಡಲು ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ’ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಸ್‌.ಪಿ.ಬಿ. ಮಹೇಶ ‘ಪ್ರಜಾವಾಣಿ’ಗೆ ತಿಳಿಸಿದರು.

5,989 ಕೆ.ಜಿ: ‘ಚಿಂಚಲಿಯ ಮಾಯಕ್ಕ ದೇವಿ ದೇವಾಲಯದಲ್ಲಿ ಕಳೆದ ವರ್ಷ 4,500 ಕೆ.ಜಿ ಎಣ್ಣೆ ಸಂಗ್ರಹವಾಗಿತ್ತು. ಕೆ.ಜಿಗೆ ₹70 ದರದಲ್ಲಿ ಮಾರಲಾಗಿತ್ತು. ಈ ಸಲ 5,989 ಕೆ.ಜಿ ಎಣ್ಣೆ ಸಂಗ್ರಹವಾಗಿದ್ದು, ಕೆಜಿಗೆ ₹90 ದರದಲ್ಲಿ ಮಾರಲು ತೀರ್ಮಾನಿಸಿದ್ದೇವೆ’ ಎಂದು ದೇವಾಲಯದ ಕಾರ್ಯದರ್ಶಿ ಯಲ್ಲಪ್ಪ ಮಾಲೋಜಿ ಹೇಳಿದರು.


Spread the love

About Laxminews 24x7

Check Also

ಫಿನಾಯಿಲ್ ಮಾರಾಟ ಮಾಡುತ್ತ ಚಿನ್ನದಂಗಡಿ ದೋಚಿದ್ದ ರಾಜಸ್ಥಾನಿ ಗ್ಯಾಂಗ್

Spread the loveಬೆಂಗಳೂರು : ಫಿನಾಯಿಲ್ ಸರಬರಾಜು ಮಾಡುತ್ತ ಚಿನ್ನದಂಗಡಿ ದೋಚಿದ್ದ ಐವರು ಆರೋಪಿಗಳನ್ನ ಕೆ. ಆರ್. ಪುರಂ ಠಾಣೆ ಪೊಲೀಸರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ