ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಅವರು ತಮಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಕುಮಾರಸ್ವಾಮಿ, ಆ ದೂರಿಗೆ ನಾನು ಕಾನೂನು ಪ್ರಕಾರವೇ ಉತ್ತರಿಸುತ್ತೇನೆ ಎಂದಿದ್ದಾರೆ.
ನಾನು ಅವರಿಗೆ ಬೆದರಿಕೆ ಹಾಕಿದ್ದೇನೆ ಎಂದು ದೂರು ನೀಡಿರುವ ಎಡಿಜಿಪಿಯವರು ನನಗೆ ಹೆದರಬೇಕಾದ ಅಗತ್ಯವಿಲ್ಲ. ನಾನು ಅವರಿಗೆ ಬೆದರಿಕೆ ಎಲ್ಲಿ ಹಾಕಿದ್ದೇನೆ? ಎಂದು ಪ್ರಶ್ನಿಸಿದ ಅವರು, ಎಡಿಜಿಪಿ ಅವರಿಗೆ ಸಂಬಂಧಿಸಿ ದಾಖಲೆಗಳ ಸಮೇತ ಹೇಳಿದ್ದೇನಷ್ಟೇ. ಅದನ್ನೇ ಬೆದರಿಕೆ ಅಂದರೆ ಹೇಗೆ? ಎಂದು ಕೇಳಿದ್ದಾರೆ.
ಆ ಅಧಿಕಾರಿ ಬಗ್ಗೆ ಪ್ರೆಸ್‌ಮೀಟ್‌ನಲ್ಲಿ ಮಾತಾಡಿದ್ದು ಸತ್ಯ. ಆದರೆ ನಾನೇನು ಹೇಳಿದ್ದೇನೆ ಎನ್ನುವುದು ಮಾಧ್ಯಮಗಳಲ್ಲೇ ಸ್ಪಷ್ಟವಾಗಿದೆ. ಈಗ ರಾಜಕೀಯ ದುರುದ್ದೇಶದಿಂದ ನನ್ನ ಮೇಲೆ ದೂರು ಕೊಟ್ಟಿದ್ದಾರೆ. ಇದಕ್ಕೆಲ್ಲ ನಾನು ಹೆದರುವುದಿಲ್ಲ. ಅವರೂ