Breaking News

ಅಪ್ಪನಿಂದ ಬಂದ ಆಸ್ತಿ ಕಾನೂನುಬದ್ಧವಾಗಿರುತ್ತದೆ :ಸಚಿವ ಜಮೀರ್ ಅಹ್ಮದ್ ಗೆ ಶಾಸಕ ಯತ್ನಾಳ್ ತಿರುಗೇಟು

Spread the love

ಬೆಂಗಳೂರು : ವಕ್ಫ್ ಯತ್ನಾಳ್ ಅಪ್ಪನ ಆಸ್ತಿ ಅಲ್ಲ ಎಂಬ ಸಚಿವ ಜಮೀರ್ ಅಹ್ಮದ್ ಹೇಳಿಕೆಗೆ ಟ್ವೀಟರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು ನೀಡಿದ್ದು, ಅಪ್ಪನಿಂದ ಬಂದ ಆಸ್ತಿ ಕಾನೂನುಬದ್ಧವಾಗಿರುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.

 

ಟ್ವೀಟ್ ನಲ್ಲಿ ಜಮೀರ್ ಅಹ್ಮಡ್ ವಿರುದ್ಧ ಕಿಡಿ ಕಾರಿರುವ ಅವರು, ಅಪ್ಪನಿಂದ ಬಂದ ಆಸ್ತಿ ಕಾನೂನುಬದ್ಧವಾಗಿರುತ್ತದೆ. ಯಾರದೋ ಅಪ್ಪನ ಆಸ್ತಿಯನ್ನು ನಮ್ಮದು ಎಂದು ಹೇಳುವ ವಕ್ಫ್ ಪರಿಕಲ್ಪನೆ/ಕಾನೂನು ಅಸಂವಿಧಾನಿಕ ಹಾಗೂ ಕಾನೂನು ಬಾಹಿರ. ಜಮೀರ್ ಅವರೇ, ದೇಣಿಗೆ ಪಡೆದು ಇಂದು ವಕ್ಫ್ ಭಾರತದ ಮೂರನೇ ಅತಿದೊಡ್ಡ ಭೂಒಡೆಯ ಆಗಿದೆಯಾ ? ಇದನ್ನು ನಂಬುವುದಕ್ಕೆ ಸಾಧ್ಯವಿದೆಯೇ ?

ವಕ್ಫ್ ನಿಂದ ಆರ್ಥಿಕ ಸಮಾನತೆ ಸಾಧ್ಯವಿದೆಯೇ ? ಅಸಲೀಗೆ, ವಕ್ಫ್ ನಂತ ಕಾಯ್ದೆ ಮುಸ್ಲಿಂ ಬಾಹುಳ್ಯ ದೇಶಗಳಲ್ಲೇ ಇಲ್ಲ, ಇನ್ನು ಜಾತ್ಯತೀತ ದೇಶವಾದ ಭಾರತದಲ್ಲಿ ಏಕೆ ಬೇಕು ? ರೋಷಾವೇಶದಿಂದ ಟೀಕೆ ಮಾಡುವ ಮುನ್ನ ಸತ್ಯಾಸತ್ಯತೆಯನ್ನು ಪರಾಮರ್ಶಿಸಿ. ಜಾತ್ಯತೀತ ರಾಷ್ಟ್ರದಲ್ಲಿ ವಕ್ಫ್ ಕಾನೂನುಗಳು ಅರಾಜಕತೆ ಉಂಟುಮಾಡುತ್ತದೆ ಎಂಬುದನ್ನು ತಿಳಿಯಿರಿ

ಸಿಕ್ಕ, ಸಿಕ್ಕ ಭೂಮಿ ನಮ್ಮದು ಎಂದು ನಿಮ್ಮ ಷರಿಯಾ ಕಾನೂನನ್ನು ಇಲ್ಲಿ ಅನ್ವಯಗೊಳಿಸಲು ಇದು ಇರಾನ್ ಅಥವಾ ಟರ್ಕಿ ಅಲ್ಲ. ಇದು ಭಾರತ. ಜವಾಬ್ದಾರಿಯುತ ಸಚಿವರಾಗಿ, ತೂಕವಾಗಿ, ಪ್ರಬುದ್ಧತೆಯಿಂದ ಮಾತನಾಡಿ. ಕುಂಟುತ್ತಿರುವ ನಿಮ್ಮ ಘನತೆಗೆ ಸರಿಯಾದೀತು.


Spread the love

About Laxminews 24x7

Check Also

ರಸ್ತೆಗುಂಡಿ ಮುಚ್ಚಲು ನೀಡಿದ್ದ ಗಡುವು ಅಂತ್ಯ: ‘Please ask D.K.Shivakumar’ ಎಂದ ಸಿದ್ದರಾಮಯ್ಯ

Spread the loveಬೆಂಗಳೂರು: ರಾಜಧಾನಿಯಲ್ಲಿ ಹಾಳಾಗಿರುವ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಧಿಕಾರಿಗಳಿಗೆ ನೀಡಿದ್ದ ಗಡುವು ಇಂದಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ