Breaking News

ಆಟೊದವರ ಸಮಸ್ಯೆಗಳೇನು?

Spread the love

ಆಟೊದವರ ಸಮಸ್ಯೆಗಳೇನು?

* ನಗರದಲ್ಲಿ ಎಲ್ಲ ಕಡೆಯೂ ‘ಶೇರಿಂಗ್‌’ ವ್ಯವಸ್ಥೆಗೆ ಜನ ಮುಗಿಬೀಳುತ್ತಾರೆ. ಮೀಟರ್‌ ಅಳವಡಿಸುವ ಮುನ್ನ ಶೇರಿಂಗ್‌ ವ್ಯವಸ್ಥೆ ಬಂದ್ ಮಾಡಿಸಬೇಕು.

* ಗ್ರಾಮೀಣ ಪ್ರದೇಶಕ್ಕೆ ಪರವಾನಗಿ ‍ಪಡೆದವರೂ ನಗರದಲ್ಲಿ ಓಡಿಸುತ್ತಾರೆ. ನಗರದ ‍ಪರವಾನಗಿ ಇದ್ದವರು ಏನು ಮಾಡಬೇಕು?

* ಕನಿಷ್ಠ ದೂರದ ದರವನ್ನು ₹30 ಮಾಡಲಾಗಿದೆ. ಇದು ಏಳು ವರ್ಷಗಳ ಹಿಂದಿನ ದರ. ಕನಿಷ್ಠ ದರವನ್ನೂ ಹೆಚ್ಚಿಸಬೇಕು.

* ಮೀಟರ್‌ಗಳ ದುರಸ್ತಿ ಮಾಡುವವರು ಒಬ್ಬರೂ ಬೆಳಗಾವಿಯಲ್ಲಿ ಇಲ್ಲ. ಜಿಲ್ಲಾಡಳಿತ ವ್ಯವಸ್ಥೆ ಮಾಡಬೇಕು.

* ಹೊಸ ಮೀಟರ್‌ಗಳಿಗೆ ಕನಿಷ್ಠ ₹10 ಸಾವಿರ ದರವಿದೆ. ರಿಯಾಯಿತಿ ದರದಲ್ಲಿ ಕೊಡಿಸಬೇಕು.

* ಹೊಸ ಆಟೊಗಳ ಪರವಾನಗಿ ನೀಡುವುದನ್ನು ನಿಲ್ಲಿಸಬೇಕು.

ಬೆಳಗಾವಿ ನಗರ ಕೇಂದ್ರ ಸ್ಥಾನದಿಂದ 7 ಕಿ.ಮೀ ದೂರದಷ್ಟು ವ್ಯಾಪಿಸಿದೆ. ಈಗಾಗಲೇ 10274ಕ್ಕೂ ಹೆಚ್ಚು ಆಟೊಗಳು ಇವೆ. ಇದರಲ್ಲಿ 7893 ಆಟೊಗಳಿಗೆ ಮಾತ್ರ ಪರ್ಮಿಟ್‌ ಇವೆ. ನಗರದ ವ್ಯಾಪ್ತಿ ಗಮನಿಸಿದರೆ ಆಟೊಗಳ ಸಂಖ್ಯೆ ಅತಿ ಹೆಚ್ಚಾಯಿತು. ಈಗಲೂ ಪ್ರತಿದಿನ 10 ಆಟೊಗಳಿಗೆ ಅನುಮತಿ ನೀಡಲಾಗುತ್ತಿದೆ. ಇದರಿಂದ ಪ್ರಯಾಣಿಕರಿಗಾಗಿ ಇಡೀ ದಿನ ಕಾಯಬೇಕಾಗಿದೆ ಎಂಬುದು ಆಟೊ ಚಾಲಕರ ಗೋಳು. ಎಲ್ಲೆಡೆ ನಗರ ಸಾರಿಗೆ ಬಸ್‌ ಉಚಿತವಾಗಿ ಸಂಚರಿಸುತ್ತಿವೆ. ಆಟೊಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಕಡಿಮೆಯಾಗಿದೆ. ರಾತ್ರಿ ಒಂದೂವರೆಯಷ್ಟು ದರ ಪಡೆಯಬೇಕು ಎಂಬ ನಿಯಮವೇ ಇದೆ. ಆದರೂ ಜನ ವಿರೋಧಿಸುತ್ತಾರೆ ಎಂಬುದು ಅವರ ಚಿಂತೆ.7 ಕಿ.ಮೀ ವ್ಯಾ‌ಪ್ತಿ 10274 ಆಟೊ!


Spread the love

About Laxminews 24x7

Check Also

ಶಿರಗುಪ್ಪಿಯಲ್ಲಿ ರಕ್ತದಾನ ಶಿಬಿರ; ಡಾ.ಅಮೋಲ ಸರಡೆ ಅವರ ಕಾರ್ಯ ಶ್ಲಾಘನೀಯ: ರಾಜು ಕಾಗೆ..

Spread the loveಶಿರಗುಪ್ಪಿಯಲ್ಲಿ ರಕ್ತದಾನ ಶಿಬಿರ; ಡಾ.ಅಮೋಲ ಸರಡೆ ಅವರ ಕಾರ್ಯ ಶ್ಲಾಘನೀಯ: ರಾಜು ಕಾಗೆ.. ! ತಮ್ಮ ಹುಟ್ಟು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ