ಬಿಜೆಪಿ ಬಲಿಷ್ಠವಾಗಿದೆ, ಬಿಜೆಪಿ ಪಕ್ಷವು ಎಂತಹ ಚುನಾವಣೆ ಇದ್ದರೂ ಯಾವುದೇ ಅಡೆತಡೆ ಇಲ್ಲದೆ ಗೆದ್ದು ಬೀಗಲಿದೆ, ಬಿಜೆಪಿ ಪಕ್ಷವನ್ನು ಸೋಲಿಸುವುದು ಕಷ್ಟ… ಹೀಗೆ ಕಳೆದ ಕೆಲವು ವರ್ಷಗಳಿಂದ ಬಿಜೆಪಿ ಪಕ್ಷದ ಬಗ್ಗೆ ಕೆಲವು ಕಠಿಣವಾದ ನಂಬಿಕೆಗಳು ಹುಟ್ಟಿಕೊಂಡಿದ್ದವು.
ಈ ನಂಬಿಕೆಗಳು ಚುನಾವಣೆಯಲ್ಲಿ ಕೈಹಿಡಿದು ನಡೆಸುವ ನಿರೀಕ್ಷೆ ಕೂಡ ಇತ್ತು. ಆದರೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ನಡೆದ ಘಟನೆಗಳು ಇದೀಗ ಬಿಜೆಪಿ ಪಕ್ಷವನ್ನು ಸೋಲಿನ ಸುಳಿಗೆ ತಳ್ಳಿದೆಯಾ? ಹರಿಯಾಣ & ಜಮ್ಮು ಮತ್ತು ಕಾಶ್ಮೀರದಲ್ಲಿ ಏನಾಗುತ್ತಿದೆ?
ಬಿಜೆಪಿ ಚುನಾವಣಾ ಇತಿಹಾಸದಲ್ಲಿ 2014ರ ತನಕ ಒಂದು ಲೆಕ್ಕ, 2014 ನಂತರ ಶುರುವಾಗಿದ್ದೇ ಮತ್ತೊಂದು ಲೆಕ್ಕ. ಯಾಕಂದ್ರೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ & ಜೊತೆಗಾರ ಪಕ್ಷಗಳು ದೊಡ್ಡ ಗೆಲುವು ಸಾಧಿಸಿದ್ದವು. ಆ ನಂತರ 2019ರ ಲೋಕಸಭೆ ಕೂಡ ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿತ್ತು. ಹೀಗಿದ್ದಾಗಲೇ 2024ರ ಲೋಕಸಭೆ ಚುನಾವಣೆಯಲ್ಲಿ, ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ ಹೊಸ ಇತಿಹಾಸ ನಿರ್ಮಾಣ ಮಾಡುವುದು ಗ್ಯಾರಂಟಿ ಅಂತಾ ಹೇಳಲಾಗಿತ್ತು. ಆದರೆ ಫಲಿತಾಂಶ ಬಂದಾಗ ಖುದ್ದು ಬಿಜೆಪಿ ನಾಯಕರು ಕೂಡ ಆ ರಿಸಲ್ಟ್ ನೋಡಿ ಒಮ್ಮೆ ಯೋಚಿಸುವ ಪರಿಸ್ಥಿತಿ ಬಂದಿತ್ತು. ಹೀಗೆ 2024ರ ಲೋಕಸಭೆ ಚುನಾವಣೆ ಆಘಾತದ ಬೆನ್ನಲ್ಲೇ ಮತ್ತೊಂದು ಶಾಕ್ ಇದೀಗ ಬಿಜೆಪಿಗೆ ಸಿಗುತ್ತಿದೆಯಾ?