ನವಲಗುಂದ: ಹುಬ್ಬಳ್ಳಿ-ವಿಜಯಪೂರ ರಾಷ್ಟ್ರೀಯ ಹೆದ್ದಾರಿ ಶೆಟ್ಟರ ಕೆರೆ ಹತ್ತಿರ ಅಂದಾಜು ₹5.40 ಲಕ್ಷ ಮೌಲ್ಯದ ನಕಲಿ ಗೋಲ್ಡ್ ಪ್ಲ್ಯಾಕ್ ಸಿಗರೇಟ್ ಹಾಗೂ ಲೈಟ್ಸ್ ಪ್ಯಾಕ್ ಸಿಗರೇಟ್ ಪ್ಯಾಕೇಟ್‌ಗಳನ್ನು ಸಾಗಿಸುತ್ತಿದ್ದ ವ್ಯಕ್ತಿಗಳನ್ನು ವಾಹನ ಸಮೇತ ಪೊಲೀಸರು ಬಂಧಿಸಿದ್ಧಾರೆ.
ಉಡುಪಿ ಸಂತೆಕಟ್ಟೆ ಮೂಲದ ಮಹ್ಮದ ನೌಶಾದ, ಬೆಂಗಳೂರು ಮೂಲದ ಮಹ್ಮದ ನಾಸಿರ್ ಬಂಧಿತ ಆರೋಪಿಗಳು.
ಆರೋಪಿಗಳು 160 ಬಂಡಲ್‌ಗಳಲ್ಲಿ 3200 ನಕಲಿ ಸಿಗರೇಟ್ ಪಾಕೀಟ್‌ಗಳನ್ನು ಕಾರಿನಲ್ಲಿ ಸಾಗಿಸುತ್ತಿದ್ದರು. ಈ ಕುರಿತು ಬೆಂಗಳೂರು ಮೂಲದ ಶ್ರೀನಿವಾಸ ಎಸ್. ಚಿನ್ನಪ್ಪ ನವಲಗುಂದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Laxmi News 24×7