ಚಾಮರಾಜನಗರ : ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರ ವಿರುದ್ಧದ 3 ವರ್ಷಗಳ ಹಿಂದಿನ ವಂಚನೆ ಆರೋಪ ಪ್ರಕರಣ ಸಂಬಂಧ ಇಂದು ಕೋರ್ಟ್ಗೆ ಕೃಷ್ಣ ಅವರು ವಿಚಾರಣೆಗೆ ಹಾಜರಾದರು.
ಕರುಣಾಕರ ಎಂಬುವವರಿಂದ ಕೃಷ್ಣ 2018, 2019 ಹಾಗೂ 2020ರಲ್ಲಿ ತಲಾ ಒಂದು ಲಕ್ಷ ರೂಪಾಯಿಯನ್ನು ಸಾಲ ಪಡೆದು ಸಾಲ ಹಿಂದುರುಗಿಸದೇ ವಂಚನೆ ಮಾಡಿರುವ ಆರೋಪದ ಪ್ರಕರಣ ಇದಾಗಿದೆ. ಈ ಬಗ್ಗೆ ಚಾಮರಾಜನಗರದ JMFC ಕೋರ್ಟ್ಗೆ ಅವರು ವಿಚಾರಣೆ ಎದುರಿಸಿದರು.
ವಿಚಾರಣೆ ಬಳಿಕ ಪ್ರತಿಕ್ರಿಯೆ ನೀಡಿರುವ ಕೃಷ್ಣ, ನಾನು ಕೇವಲ 50 ಸಾವಿರ ರೂಪಾಯಿ ಸಾಲ ಪಡೆದಿದ್ದೆ. ಆದರೆ 3 ಲಕ್ಷ ರೂಪಾ ಸಾಲ ಪಡೆದುಕೊಂಡಿದ್ದಾಗಿ ಪ್ರಾಮಿಸರಿ ನೋಟ್ ಬರೆಸಿಕೊಂಡು, ನನ್ನ ವಿರುದ್ಧ ಸುಳ್ಳು ಕೇಸ್ ದಾಖಲಿಸಿದ್ದರು. ಈ ಸಾಲಕ್ಕೆ ನಾನು ಬಡ್ಡಿಯೂ ಕಟ್ಟಿದ್ದೇನೆ ಎಂದಿರುವ ಅವರು, ಶೀಘ್ರವೇ ಈ ಬಗ್ಗೆ ನಿಜ ಏನು ಎಂಬುವುದು ಹೊರ ಬೀಳಲಿದೆ ಎಂದಿದ್ದಾರೆ.
Laxmi News 24×7