ಬೆಂಗಳೂರು : ಡಾಕ್ಟರ್, ಇಂಜಿನಿಯರ್ ಎಂಬ ಹುದ್ದೆಗಳಿಗೆ ಮಾತ್ರ ಸೀಮಿತವಾಗದೇ, ಸಾರ್ವಜನಿಕ ಸೇವೆಗಳಿರುವ ಹುದ್ದೆಗಳಲ್ಲಿಯೂ ಬ್ರಾಹ್ಮಣರು ಹೆಚ್ಚೆಚ್ಚು ಆಸಕ್ತಿವಹಿಸಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವತಿಯಿಂದ ಇಂದು ಆಯೋಜಿಸಿದ್ದ ವಿಶ್ಚಾಮಿತ್ರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಸಿದ್ದಾಂತಕ್ಕಿಂತ ಒಳ್ಳೇ ಉದ್ದೇಶ ನಮ್ಮಲ್ಲಿ ಇರಬೇಕು ಎಂದಿದ್ದಾರೆ.
ಸಾರ್ವಜನಿಕ ಹುದ್ದೆಗಳಲ್ಲಿಯೂ ನಮ್ಮವರೇ ಇದ್ದರೆ, ಆಗ ಎಲ್ಲ ಸಮುದಾಯಗಳಿಗೆ ಸ್ಪಂದಿಸುವ ಮೂಲಕ ನಮ್ಮ ಸಮಾಜಕ್ಕೂ ಒಳ್ಳೆಯದನ್ನು ಮಾಡಲು ಸಾಧ್ಯವಾಗುತ್ತದೆ. ಇನ್ನು ರಾಜಕಾರಣಕ್ಕೆ ಬ್ರಾಹ್ಮರು ಬರಬಾರದು ಎಂಬ ತಮ್ಮ ಮಾತಿನ ಉದ್ದೇಶವಲ್ಲ. ಈ ಕ್ಷೇತ್ರ ತೀರಾ ಕಷ್ಟದಾಯವಾಗಿದ್ದು, ಬರುವ ಮೊದಲು ಯೋಚಿಸಿಯೇ ಬರಬೇಕು ಎಂದು ಸಲಹೆ ನೀಡಿದ್ದಾರೆ.
Laxmi News 24×7