ರಾಮದುರ್ಗ: ಪಟ್ಟಣದಲ್ಲಿ ಸೋಮವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಸುಮಾರು 30 ನಿಮಿಷಗಳ ಕಾಲ ಗುಡುಗು ಸಹಿತ ಭಾರೀ ಮಳೆ ಸುರಿಯಿತು.
ರಭಸದಿಂದ ಸುರಿದ ಮಳೆಯಿಂದಾಗಿ ಪಟ್ಟಣದ ಇಕ್ಕೆಲಗಳಲ್ಲಿ ನೀರು ಹರಿದು ಸ್ವಚ್ಛಗೊಂಡಿತು. ರಸ್ತೆ, ಚರಂಡಿಗಳಲ್ಲಿ ನೀರು ತುಂಬಿ ಹರಿದು ಕೆಲಕಾಲ ರಸ್ತೆ ಸಂಚಾರ ನಿಂತಿತ್ತು.
ಪಟ್ಟಣದಲ್ಲಿ ಹಾಯ್ದು ಹೋಗಿರುವ ಕೆಶಿಫ್ ರಸ್ತೆ ಮಗ್ಗುಲಿಗೆ ಅವೈಜ್ಞಾನಿಕವಾಗಿ ನಿರ್ಮಿಸಿದ ಚರಂಡಿಗಳಲ್ಲಿ ಹೂಳು ತುಂಬಿಕೊಂಡು ರಸ್ತೆಯನ್ನೆಲ್ಲ ಆವರಿಸಿತ್ತು. ಪಕ್ಕದ ಅಂಬೇಡ್ಕರ್ ಕಾಲೊನಿಯಲ್ಲಿಯೂ ನೀರು ಹರಿದು ಅವಾಂತರ ಸೃಷ್ಟಿಸಿತು.
ಮಳೆಯಾದಾಗೊಮ್ಮೆ ಚರಂಡಿ ನೀರು ಅಂಬೇಡ್ರ್ ನಗರದ ಮನೆಗಳಿಗೆ ನುಗ್ಗುತ್ತಿದೆ ಎಂದು ಅಲ್ಲಿನವರು ಕೇಳಿಕೊಂಡರೂ ಪುರಸಭೆ ಮತ್ತು ಲೋಕೋಪಯೋಗಿ ಇಲಾಖೆ ಸ್ಪಂದಿಸುತ್ತಿಲ್ಲ. ಪರಿಶಿಷ್ಟರಾದ ತಮಗೆ ಮತ್ತೆ ಕೊಳಚೆಯಲ್ಲಿ ಇರುವಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ ಎಂದು ಕಾಲೊನಿಯ ಜನ ಆರೋಪಿಸಿದರು.
Laxmi News 24×7