Breaking News

ಮಹಾಲಕ್ಷ್ಮಿ ಹಂತಕನ ಚಾಣಾಕ್ಷತನ ಕಂಡು ಬೆಸ್ತು ಬಿದ್ದ ಪೊಲೀಸರು

Spread the love

ಬೆಂಗಳೂರು, ಸೆ.24- ಸಿಲಿಕಾನ್ ಸಿಟಿಯನ್ನೇ ಬೆಚ್ಚಿಬೀಳಿಸಿರುವ ವಯ್ಯಾಲಿ ಕಾವಲ್ನ ಮಹಾಲಕ್ಷ್ಮಿ ಕೊಲೆಯ ಹಂತಕ ಚಾಣಾಕ್ಷತನದಿಂದ ಕೃತ್ಯವೆಸಗಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಒಂಟಿ ಮಹಿಳೆ ಮಹಾಲಕ್ಷ್ಮಿಯನ್ನು ಮಚ್ಚಿನಿಂದ ಭೀಕರವಾಗಿ ಕೊಂದು ನಂತರ ತುಂಡು-ತುಂಡುಗಳನ್ನಾಗಿ ಕತ್ತರಿಸಿ, ಆಕ್ಸಲ್ ಬ್ಲೇಡ್ನಿಂದ ಕೊಯ್ದು ವಾಸನೆ ಬರದಂತೆ ಅವುಗಳಿಗೆ ರಾಸಾಯನಿಕ ಸಿಂಪಡಿಸಿ ಫ್ರಿಡ್ಜ್ ನಲ್ಲಿ ತರಕಾರಿ ಜೋಡಿಸುವಂತೆ ಜೋಡಿಸಿದ್ದಾನೆ.

ಮಹಾಲಕ್ಷ್ಮಿ ಹಂತಕನ ಚಾಣಾಕ್ಷತನ ಕಂಡು ಬೆಸ್ತು ಬಿದ್ದ ಪೊಲೀಸರು

ಮನೆಯೊಳಗೆ ಮಹಾಲಕ್ಷ್ಮಿ ಕೊಲೆ ಮಾಡಿದ ಸ್ಥಳದಲ್ಲಿ ಯಾವುದೇ ರಕ್ತದ ಕಲೆಗಳು ಕಾಣದಂತೆ ಆರೋಪಿಯು ಯಾವುದೋ ರಾಸಾಯನಿಕ ಸಿಂಪಡಿಸಿ, ಸ್ವಚ್ಚಪಡಿಸಿ ಮನೆಗೆ ಬೀಗ ಹಾಕಿಕೊಂಡು ಚಾಣಾಕ್ಷತನದಿಂದ ಜಾಗ ಖಾಲಿಮಾಡಿದ್ದಾನೆ.

ಒಂದು ವೇಳೆ ಈ ಮನೆಯೊಳಗೆ ಯಾರಾದರೂ ಬಂದರೆ ಕೊಲೆಯಾಗಿರುವುದು ಗೊತ್ತಾಗಬಾರದೆಂದು ಬಹಳ ಎಚ್ಚರಿಕೆಯಿಂದ ಆರೋಪಿಯು ಮೊದಲೇ ಮಾಡಿಕೊಂಡಿದ್ದ ಸಂಚಿನಂತೆ ತನ್ನ ಕೃತ್ಯವನ್ನು ಮಾಡಿಮುಗಿಸಿದ್ದಾನೆ. ಈ ಕೊಲೆ ಬೆಳಕಿಗೆ ಬಂದರೆ ಪೊಲೀಸರು ತನ್ನ ಜನ ಜಾಲಾಡುತ್ತಾರೆ ಎಂಬುದನ್ನು ಅರಿತು ಆರೋಪಿ ತನ್ನ ಊರಿಗೆಹೋಗದೆ ಈಶಾನ್ಯ ರಾಜ್ಯಗಳಲ್ಲಿ ತಲೆಮರೆಸಿಕೊಂಡು ಓಡಾಡುತ್ತಿದ್ದಾನೆ. ಅಲ್ಲದೆ ತನ್ನ ಮೊಬೈಲ್ ಸಹ ಸ್ವಿಚ್‌ಆಫ್ ಮಾಡಿಕೊಂಡಿದ್ದಾನೆ.

ಪೊಲೀಸರು ಮಹಾಲಕ್ಷ್ಮಿಯ ಮೊಬೈಲ್ನ್ನು ವಶಕ್ಕೆ ಪಡೆದು ಅದರಲ್ಲಿರುವಕರೆಗಳನ್ನು ಆಧರಿಸಿ, ಹೆಚ್ಚಿನ ಮಾಹಿತಿಗಳನ್ನು ಸಂಗ್ರಹಿಸಿ ಹಂತಕನ ಪತ್ತೆಗೆಬಲೆಬೀಸಿದ್ದಾರೆ.

ಹಂತಕ ಮಹಾಲಕ್ಷ್ಮಿಯನ್ನು ಕೊಲೆ ಮಾಡಿದ ಬಳಿಕ ಎರಡು-ಮೂರು ದಿನಗಳ ಕಾಲ ಆಕೆಯ ಮನೆಯಲ್ಲೇ ಉಳಿದುಕೊಂಡು ಎಲ್ಲಾ ಸಾಕ್ಷಗಳನ್ನು ಬಹಳ ಚಾಣಾಕ್ಷತನದಿಂದ ನಾಶಪಡಿಸಿ, ಇನ್ನೇನ್ನಾದರೂ ಕುರುಹುಗಳು ಪೊಲೀಸರಿಗೆ ಸಿಗುತ್ತದೆಯೇ ಎಂಬುದನ್ನು ಮನೆಯನೆಲ್ಲಾ ಪರಿಶೀಲಿಸಿದ ನಂತರ ಸ್ಥಳದಿಂದ ಜಾಗ ಖಾಲಿಮಾಡಿದ್ದಾನೆ.

ಒಟ್ಟಾರೆ ಒಂಟಿ ಮಹಿಳೆ ಮಹಾಲಕ್ಷ್ಮಿ ಕೊಲೆ ಪ್ರಕರಣ ನಗರ ಪೊಲೀಸರಿಗೆ ಒಂದು ಸವಾಲಾಗಿದ್ದು, ಹಂತಕ ಎಷ್ಟೇ ಚಾಣಾಕ್ಷತನದ ಬುದ್ಧಿ ತೋರಿಸಿದರೂ ಪೊಲೀಸರು ಅತೀ ಶೀಘ್ರದಲ್ಲೇ ಒಂದಲ್ಲಾ ಒಂದುದಿನ ಆತನ ಎಡೆಮುರಿ ಕಟ್ಟುವುದಂತೂ ಸತ್ಯ.


Spread the love

About Laxminews 24x7

Check Also

ನಾನು ಬಾಯಿಬಿಟ್ಟರೆ ಸರ್ಕಾರವೇ ಅಲುಗಾಡುತ್ತೆ’ ಎಂದು ಅಳಂದ ಶಾಸಕ ಬಿಆರ್ ಪಾಟೀಲ್ (

Spread the loveಬೆಂಗಳೂರು, ಜುಲೈ 1: ‘ನಾನು ಬಾಯಿಬಿಟ್ಟರೆ ಸರ್ಕಾರವೇ ಅಲುಗಾಡುತ್ತೆ’ ಎಂದು ಅಳಂದ ಶಾಸಕ ಬಿಆರ್ ಪಾಟೀಲ್ (BR Patil) ಆಡಿದ್ದ ಅಬ್ಬರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ