ಹೊಸದಿಲ್ಲಿ: ದೇಶದ ಅತ್ಯಂತ ಸುಂದರ ರೈಲು ಮಾರ್ಗಗಳನ್ನು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಪಟ್ಟಿ ಮಾಡಿದ್ದು, ಅದರಲ್ಲಿ ಕರ್ನಾಟಕದ ದೂಧ್‌ಸಾಗರ್ ಕೂಡ ಒಂದು ಎಂಬುದು ವಿಶೇಷ.
ಕರ್ನಾಟಕ ಹಾಗೂ ಗೋವಾ ರಾಜ್ಯಗಳ ಗಡಿಯಲ್ಲಿರುವ ದೂಧ್‌ಸಾಗರ ಜಲಪಾತ ಈ ಎರಡೂ ರಾಜ್ಯಗಳ ಸಂಪರ್ಕ ಕೊಂಡಿಯಾಗಿದೆ.
ದೂಧ್‌ಸಾಗರ ಜಲಪಾತದ ಎದುರು ರೈಲು ಹಾದು ಹೋಗುವಾಗ ಮನಮೋಹಕ ದೃಶ್ಯ ಪ್ರಯಾಣಿಕರ ಕಣ್ಮನ ಸೆಳೆಯುತ್ತದೆ. ಈ ರೈಲು ಮಾರ್ಗ ಸೇರಿದಂತೆ ರೈಲ್ವೇ ಸಚಿವರು 6 ರೈಲು ಮಾರ್ಗಗಳನ್ನು ಪಟ್ಟಿ ಮಾಡಿದ್ದಾರೆ.
ಇದರಲ್ಲಿ ಗುಜರಾತ್‌ನ ಕಛ್ ಜಿಲ್ಲೆಯ ರಣ್ ಜವುಗು ಪ್ರದೇಶದಲ್ಲಿ ಹಾದು ಹೋಗುವ ನಮೋ ಭಾರತ್ ರ್ಯಾಪಿಡ್ ರೈಲು, ನೀಲಗಿರಿ ಪರ್ವತದಲ್ಲಿ ಹಾದುಹೋಗುವ ರೈಲುಗಳು, ಜಮ್ಮು-ಕಾಶ್ಮೀರದ ಬನಿಹಾಲ್ ಹಾಗೂ ಬಡ್ಗಾಮ್ ನಡುವಿನ ರೈಲು ಮಾರ್ಗ, ಕೇರಳ ಕರಾವಳಿಯಲ್ಲಿರುವ ಕಪ್ಪಿಲ್ ರೈಲು ಮಾರ್ಗ, ಹಿಮಾಲಯ ತಪ್ಪಲಿನ ಶಿಮ್ಲಾದಿಂದ ಕಲ್ಕಾಗೆ ತೆರಳುವ ಆಟಿಕೆ ರೈಲು ಮಾರ್ಗಗಳೂ ಸೇರಿವೆ.
Laxmi News 24×7