ಬೆಂಗಳೂರು: ಅಕ್ರಮ ನೋಂದಣಿ ಹಾಗೂ ತೆರಿಗೆ ವಂಚನೆಯನ್ನು ತಡೆಯುವ ಸಲುವಾಗಿ ನೋಂದಣಿ ಸಮಯದಲ್ಲಿ ಡಿಜಿಟಲ್ ಇಂಟಗ್ರೇಷನ್ ಖಾತಾ ನಿಯಮವನ್ನು ಜಾರಿಗೊಳಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಈ ಬಗೆಯೂ ಮಾಹಿತಿ ನೀಡಿದ ಅವರು, “ನಿಜವಾದ ಸ್ವತ್ತಿಗೆ ಖಾತೆ ಇಲ್ಲದಿದ್ದರೂ ಕೆಲವರು ಕೇವಲ ಪೇಪರ್ನಲ್ಲಿ ಖಾತೆ ಪ್ರಿಂಟ್ ಮಾಡಿಸಿ ಅದರ ಮೂಲಕ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ.
ಗ್ರಾಮ ಪಂಚಾಯತ್-ಬಿಬಿಎಂಪಿ ನಗರಸಭೆ ಖಾತೆ ಮಾಡಿಸದಿದ್ದರೂ ಇಂತಹ ಬೋಗಸ್ ಖಾತೆ ಮೂಲಕ ಅಕ್ರಮ ನೋಂದಣಿ ಮಾಡಲಾಗುತ್ತಿದೆ. ಇದರಿಂದ ಹಲವು ಅಮಾಯಕರು ಸಮಸ್ಯೆಗೆ ಸಿಲುಕುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
ಅಲ್ಲದೆ, “ನೋಂದಣಿ ಮಾಡಿಸುವಾಗ ಇತರೆ ಎಂಬ ಒಂದು ಕ್ಯಾಟಗರಿ ಇದೆ. ಆಶ್ರಯ ನಿವೇಶನಗಳನ್ನು ನೋಂದಾಯಿಸುವಾಗ ಮಾತ್ರ ಈ ಕ್ಯಾಟಗರಿಯನ್ನು ಬಳಸಲಾಗುತ್ತದೆ. ಇದರಲ್ಲಿ ಮಾರುಕಟ್ಟೆ ಬೆಲೆ (ಗೈಡನ್ಸ್ ವ್ಯಾಲ್ಯೂ) ಕಡಿಮೆ ಇರತ್ತೆ. ನೋಂದಣಿ ಶುಲ್ಕವೂ ಕಡಿಮೆ ಇರುತ್ತದೆ. ಹೀಗಾಗಿ ಹಲವರು ತಮ್ಮದು ಖಾಸಗಿ ಸ್ವತ್ತಾಗಿದ್ರೂ ಇತರೆ ಎಂದು ತೋರಿಸಿ ದೊಡ್ಡ ಪ್ರಮಾಣದಲ್ಲಿ ಕಟ್ಟಬೇಕಿರುವ ವೆಚ್ಚವನ್ನು ಮೋಸ ಮಾಡುತ್ತಿದ್ದಾರೆ.