ಬೆಳಗಾವಿ: ನಗರದಲ್ಲಿ ಈದ್ ಮಿಲಾದ್ ಮೆರವಣಿಗೆ ಮುಗಿಸಿ ವಾಪಸ್ ಹೋಗುತ್ತಿದ್ದಾಗ ಎರಡು ಗುಂಪುಗಳ ಯುವಕರು ತಲವಾರ್ ದಿಂದ ಹೊಡೆದಾಡಿಕೊಂಡಿದ್ದು, ಮೂವರು ಗಾಯಗೊಂಡ ಘಟನೆ ಇಲ್ಲಿಯ ರುಕ್ಮಿಣಿ ನಗರದಲ್ಲಿ ರವಿವಾರ ರಾತ್ರಿ ನಡೆದಿದೆ.
ರುಕ್ಮಿಣಿ ನಗರ ಹಾಗೂ ಉಜ್ವಲ್ ನಗರದ ಯುವಕರ ಮಧ್ಯೆ ಈ ಗಲಾಟೆ ಆಗಿದ್ದು, ಮೆರವಣಿಗೆ ಮುಗಿಸಿಕೊಂಡು ಹೋಗುವಾಗ ಒಬ್ಬರಿಗೊಬ್ಬರು ಸಿಟ್ಟಿನಿಂದ ನೋಡಿದ್ದಕ್ಕೆ ಹೊಡೆದಾಡಿಕೊಂಡಿದ್ದಾರೆ.
ತಲ್ವಾರ್ ಹಾಗೂ ಚಾಕುವಿನಿಂದ ಘರ್ಷಣೆ ಹಾಡಿದಿತ್ತು ಘಟನೆಯಲ್ಲಿ ಹೊಟ್ಟೆ ಹಾಗೂ ಕತ್ತಿನ ಭಾಗಕ್ಕೆ ಗಾಯವಾಗಿದೆ.
ಗಾಯಗೊಂಡ ಮೂವರು ಯುವಕರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಚಾಲ ಬೀಸಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ.
Laxmi News 24×7