ಕೋಲ್ಕತ್ತಾ: ಪ್ರತಿಭಟನಾ ನಿರಿತ ಕಿರಿಯ ವೈದ್ಯರು 42 ದಿನಗಳ ಬಳಿಕ ಕರ್ತವ್ಯಕ್ಕೆ ಮರಳಲು ಒಪ್ಪಿದ್ದಾರೆ, ಆದರೆ ಪೂರ್ತಿಯಾಗಿ ಅಲ್ಲ. ತುರ್ತು ಸೇವೆಗಷ್ಟೇ ಮರಳಲಿರುವ ವೈದ್ಯರು ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಿಲ್ಲ. ತಮ್ಮ ಧರಣಿಯ ಭಾಗವಾಗಿ ಸರ್ಕಾರಿ ಆಸ್ಪತ್ರೆಗಳಾದ್ಯಂತ ಹೊರರೋಗಿ ವಿಭಾಗಗಳಿಗೆ (OPD) ತಮ್ಮ ಸೇವೆಗೆ ಬರುವುದಿಲ್ಲ ಎಂದು ತಿಳಿಸಿದ್ದಾರೆ.
ಆಗಸ್ಟ್‌ನಲ್ಲಿ ತಮ್ಮ ಸಹೋದ್ಯೋಗಿಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಒತ್ತಾಯಿಸಿ ತಮ್ಮ ಧರಣಿಯನ್ನು ಮುಂದುವರೆಸಲಿದ್ದಾರೆ.
ಪಶ್ಚಿಮ ಬಂಗಾಳದ ಜೂನಿಯರ್ ಡಾಕ್ಟರ್ಸ್ ಫ್ರಂಟ್ ಸದಸ್ಯರು ಕೋಲ್ಕತ್ತಾದ ಸ್ವಾಸ್ಥ್ಯ ಭವನದ ಹೊರಗಿನ ಸ್ಥಳದಿಂದ ತಮ್ಮ ಧರಣಿಯನ್ನು ಹಿಂಪಡೆಯುವುದಾಗಿ ಮತ್ತು ಕೋಲ್ಕತ್ತಾದ ಕೇಂದ್ರೀಯ ತನಿಖಾ ದಳ (ಸಿಬಿಐ) ಕಚೇರಿಗೆ ರ್ಯಾಲಿ ನಡೆಸುವುದಾಗಿ ಹೇಳಿದ್ದಾರೆ.