ಬಳ್ಳಾರಿ: ನಗರದ ‘ಹಿಂದೂಸ್ತಾನ್ ಕ್ಯಾಲ್ಸಿನ್ಡ್ ಮೆಟಲ್ಸ್ ಪ್ರೈವೆಟ್ ಲಿಮಿಟೆಡ್’ಗೆ ₹2.11 ಕೋಟಿ ವಂಚಿಸಿದ್ದ ಆನ್‌ಲೈನ್ ವಂಚಕರ ತಂಡದ ದುಷ್ಕರ್ಮಿಯೊಬ್ಬನನ್ನು ಬಂಧಿಸುವಲ್ಲಿ ಬಳ್ಳಾರಿಯ ಸೈಬರ್, ಆರ್ಥಿಕ, ಮಾದಕ ವಸ್ತು (ಸಿಇಎನ್) ಅಪರಾಧ ಪೊಲೀಸರು ಯಶಸ್ವಿಯಾಗಿದ್ದಾರೆ.
ವಂಚನೆಯ ಜಾಲ ಬೆನ್ನುಹತ್ತಿದ್ದ ಸಿಇಎನ್ ವಿಭಾಗದ ಡಿಎಸ್‌ಪಿ ಸಂತೋಷ್ ಚೌವ್ಹಾಣ್ ಅವರ ತಂಡ, ಮಧ್ಯಪ್ರದೇಶಕ್ಕೆ ತೆರಳಿ ಸಿದಿ ಜಿಲ್ಲೆಯ ಅಜಯ್ ಕುಮಾರ್ ಜೈಸ್ವಾಲ್ ಎಂಬಾತನನ್ನು ಬಂಧಿಸಿ ರಾಜ್ಯಕ್ಕೆ ಕರೆತಂದಿದ್ದಾರೆ.
‘ಅಜಯ್ ಕುಮಾರ್ ಬಂಧನದಿಂದಾಗಿ ₹1.21 ಕೋಟಿ ವಶಕ್ಕೆ ಪಡೆಯಲು ಸಾಧ್ಯವಾಗಿದೆ. ಇದರ ಜತೆಗೆ ₹27.97 ಲಕ್ಷವನ್ನು ಖಾತೆಯಲ್ಲೇ ಫ್ರೀಜ್ ಮಾಡಲಾಗಿದೆ. ಕೃತ್ಯಕ್ಕೆ ಬಳಸಿದ ಒಂದು ಮೊಬೈಲ್ ಜಫ್ತಿ ಮಾಡಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ. ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
Laxmi News 24×7