Breaking News

ಮುನಿರತ್ನ ವಿರುದ್ಧ ಇನ್ನೂ ಎರಡು ಆಡಿಯೋ ಇದೆಚಾಲುವರಾಜು ಸ್ಫೋಟಕ ಹೇಳಿಕೆ

Spread the love

ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಇನ್ನೂ ಎರಡು ಆಡಿಯೋಗಳಿವೆ. ಅವುಗಳನ್ನು ನಾಳೆ ಬಿಡುಗಡೆ ಮಾಡುತ್ತೇನೆ ಎಂದು ಗುತ್ತಿಗೆದಾರ ಚಾಲುವರಾಜು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ, ಮಾತನಾಡಿದ ಚಲುವರಾಜು, ಮುನಿರತ್ನ ಅವರ ಇನ್ನೂ ಎರಡು ಆಡಿಯೋ ನಾಳೆ ಬಿಡುಗಡೆ ಮಾಡುತ್ತೇನೆ.

ಹನುಮಂತರಾಯಪ್ಪ ಜೊತೆ ಮಾತನಾಡಿರುವ ಆಡಿಯೋ ಹಾಗೂ 30% ಕಮಿಷನ್ ವಿಚಾರದ ಆಡಿಯೋಗಳನ್ನು ನಾಳೆ ಬಿಡುಗಡೆ ಮಾಡುತ್ತೇನೆ ಎಂದಿದ್ದಾರೆ.

ಶಾಸಕ ಮುನಿರತ್ನ ಕಳೆದ ಮೂರು ವರ್ಷಗಳಿಂದ ತನಗೆ ಕೊಡಬಾರದ ಹಿಂಸೆ ಕೊಟ್ಟಿದ್ದಾರೆ. ನನ್ನ ಪತ್ನಿಯ ಫೋಟೋ ಕಳುಹಿಸುವಂತೆ ಹಿಂಸಿಸಿದ್ದಾರೆ. ನಿಂದಿಸಿದ್ದಾರೆ. ಮುನಿರತ್ನ ಕಡೆಯವರು ರೇಣುಕಾಸ್ವಾಮಿಗೆ ಆದ ಗತಿಯೇ ನಿನಗೂ ಆಗುತ್ತೆ ಎಂದು ಹೆದರಿಸಿದ್ದಾರೆ. ರೇಣುಕಾಸ್ವಾಮಿಯನ್ನು ಹತ್ಯೆ ಮಾಡಿದ್ದು ಯಾರು ಗೊತ್ತಾ? ನಮ್ಮ ಎಂಎಲ್ ಎ ಮುನಿರತ್ನ ಭಾಮೈದ ಎಂದು ಹೆದರಿಸಿ ಧಮ್ಕಿ ಹಾಕಿದ್ದಾರೆ. ನನಗೆ ಹಾಗೂ ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದ್ದು ರಕ್ಷಣೆ ನೀಡುವಂತೆ ಚಲುವರಾಜು ಕಣ್ಣೀರಿಟ್ಟಿದ್ದಾರೆ.


Spread the love

About Laxminews 24x7

Check Also

ಗ್ರಾಮ ಪಂಚಾಯಿತಿಗಳಿಗೆ ‘ಮಹಾತ್ಮಾ ಗಾಂಧಿ ಗ್ರಾಮ ಪಂಚಾಯಿತಿ’ ಎಂದು ಮರುನಾಮಕರಣ

Spread the loveಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ದಾಖಲೆಯ 17ನೇ ರಾಜ್ಯ ಬಜೆಟ್‌ನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ