Breaking News

‘PSI ಪರಶುರಾಂ’ ಸಾವಿಗೆ ಹೃದಯಾಘಾತ ಕಾರಣ: ‘ಮರಣೋತ್ತರ ಪರೀಕ್ಷೆ ವರದಿ’ಯಲ್ಲಿ ಬಹಿರಂಗ

Spread the love

ಯಾದಗಿರಿ: ರಾಜ್ಯದಲ್ಲಿ ಪಿಎಸ್‌ಐ ಪರಶುರಾಂ ದಿಢೀರ್ ಸಾವು, ಕೋಲಾಹಲವನ್ನೇ ಸೃಷ್ಠಿಸಿತ್ತು. ಈಗ ಅವರ ಮರಣೋತ್ತರ ಪರೀಕ್ಷೆಯ ವರದಿ ಪೊಲೀಸರ ಕೈ ಸೇರಿದೆ. ಅದರಲ್ಲಿ ಪಿಎಸ್‌ಐ ಪರಶುರಾಂ ಸಾವಿಗೆ ಹೃದಯಾಘಾತವೇ ಕಾರಣ ಎಂಬುದಾಗಿ ಬಹಿರಂಗವಾಗಿದೆ.

ಯಾದಗಿರಿಯ ನಗರ ಠಾಣೆಯ ಕಾನೂನು ಸುವ್ಯವಸ್ಥೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಪರಶುರಾಮ್ ಅವರ ಅನುಮಾನಾಸ್ಪದ ಸಾವಿನ ಕುರಿತು ಹಲವು ಊಹಾಪೋಹಗಳು ಎದ್ದಿದ್ದವು.

ಈಗ ಇವುಗಳಿಗೆ ತೆರೆ ಬಿದ್ದಿದೆ. ಪಿಎಸ್‌ಐ ಪರಶುರಾಮ್ ಅವರದ್ದು ಆತ್ಮಹತ್ಯೆಯಲ್ಲ, ಹೃದಯಾಘಾತದಿಂದಾದ ಸಾವು ಎಂಬುದಾಗಿ ಮರಣೋತ್ತರ ಪರೀಕ್ಷೆ ವರದಿಯಿಂದ ತಿಳಿದು ಬಂದಿದೆ.

BIG NEWS: 'PSI ಪರಶುರಾಂ' ಸಾವಿಗೆ ಹೃದಯಾಘಾತ ಕಾರಣ: 'ಮರಣೋತ್ತರ ಪರೀಕ್ಷೆ ವರದಿ'ಯಲ್ಲಿ ಬಹಿರಂಗ

ಪಿಎಸ್‌ಐ ಪರಶುರಾಂ ಸಾವಿನ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾದ ಹಿನ್ನಲೆಯಲ್ಲಿ ಅವರ ಮೃತದೇಹದ ವಿವಿಧ ಅಂಗಾಂಗಗಳನ್ನು ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಈ ಪರೀಕ್ಷೆಯಲ್ಲಿ ಪರಶುರಾಂ ದೇಹದಲ್ಲಿ ಯಾವುದೇ ವಿಷಕಾರಿ ಅಂಶ ಕಂಡುಬಂದಿಲ್ಲ. ಅವರು ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.


Spread the love

About Laxminews 24x7

Check Also

ಭದ್ರಾವತಿ | ಶಾಲೆಯಲ್ಲಿ 10ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ – ಆಸ್ಪತ್ರೆಗೆ ದಾಖಲು

Spread the loveಶಿವಮೊಗ್ಗ: ಭದ್ರವಾತಿ  ತಾಲೂಕಿನ ಅರಳಹಳ್ಳಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ 10ಕ್ಕೂ ಹೆಚ್ಚು ಮಕ್ಕಳಲ್ಲಿ  ವಾಂತಿ ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ