11: ಜಾಸ್ತಿ ಮೈಮೇಲೆ ಬಿಟ್ಟುಕೊಂಡ್ರೆ ತಲೆ ಮೇಲೆ ಕುಳಿತುಕೊಂಡುಬಿಡ್ತಾರೆನ್ನುವ ಮಾತಿದೆ. ಅದೇ ರೀತಿ ನಮ್ಮ ರಾಜ್ಯದಲ್ಲೂ ಹೊರ ರಾಜ್ಯದವರದ್ದೇ ದರ್ಬಾರ್ ಆಗ್ಬಿಟ್ಟಿದೆ. ಆದ್ರೆ ಕನ್ನಡಿಗರು ಒಮ್ಮೆ ತಾಳ್ಮೆ ಕಳೆದುಕೊಂಡರೆ, ಮೆರೆಯುವವರ ಬುಡಕ್ಕೆ ಬೆಂಕಿ ಇಡುತ್ತಾರೆನ್ನುವುದು ತಿಳಿದಿರಬೇಕಾಗುತ್ತದೆ.
ಇದೀಗ ಕೇರಳದಿಂದ ಕಸ ತಂದು ರಾಜ್ಯದಲ್ಲಿ ಸುರಿದ ಲಾರಿ ಚಾಲಕನಿಗೆ ಗುಂಡ್ಲುಪೇಟೆ ಪುರಸಭೆ ದಂಡ ವಿಧಿಸಿ, ಛೀಮಾರಿ ಹಾಕಿದೆ.
ಗುಂಡ್ಲುಪೇಟೆ ಪಟ್ಟಣದ ಹೊರ ವಲಯದ ಕೇರಳ ರಸ್ತೆಯಲ್ಲಿ ಪುರಸಭೆ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕೇರಳದಿಂದ ತಂದ ತ್ಯಾಜ್ಯ ಸುರಿಯುತ್ತಿದ್ದ ವೇಳೆ ಸಿಕ್ಕಿಬಿದ್ದ ವಾಹನ ಚಾಲಕನಿಗೆ ಪುರಸಭೆ ಅಧಿಕಾರಿಗಳು ದಂಡ ವಿಧಿಸಿದ್ದಾರೆ.
ಈಚರ್ ವಾಹನ ಚಾಲಕ ಕೇರಳದಿಂದ ವಾಪಸ್ ಬರುವಾಗ ಬಾಳೆ ಸೇರಿದಂತೆ ಇನ್ನಿತರ ತ್ಯಾಜ್ಯವನ್ನು ತಂದು ಪುರಸಭೆ ತ್ಯಾಜ್ಯ ವಿಲೇವಾರಿ ಘಟಕದ ಬಳಿಯಲ್ಲಿ ಸುರಿಯುತ್ತಿದ್ದನು. ಈ ವೇಳೆ ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕೈಗೆ ಸಿಕ್ಕಿಬಿದ್ದು 5,000 ದಂಡ ವಿಧಿಸಿ, ಎಚ್ಚರಿಕೆ ಕೊಡಿಸಿಕೊಂಡು ಹೋಗಿದ್ದಾರೆ.