Breaking News

ದ್ವಿಚಕ್ರವಾಹನ ಕಳವು ಮಾಡುತ್ತಿದ್ದ ಆರೋಪಿ ಬಂಸಿಧಿ 2 ಲಕ್ಷ ರೂ. ಬೆಲೆ ಬಾಳುವ 5 ವಿವಿಧ ಕಂಪನಿಯ ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ

Spread the love

ಬೆಂಗಳೂರು,- ದ್ವಿಚಕ್ರವಾಹನ ಕಳವು ಮಾಡುತ್ತಿದ್ದ ಆರೋಪಿಯನ್ನು ಉತ್ತರ ವಿಭಾಗದ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಬಂಸಿಧಿ 2 ಲಕ್ಷ ರೂ. ಬೆಲೆ ಬಾಳುವ 5 ವಿವಿಧ ಕಂಪನಿಯ ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ವಿಜಯಕುಮಾರ್ ಅಯ್ಯರ್(35) ಬಂತ ಆರೋಪಿ. ಈತನ ಬಂಧನದಿಂದ ಸುಬ್ರಹ್ಮಣ್ಯನಗರ, ಕೋಣನಕುಂಟೆ ಸೇರಿದಂತೆ ಐದು ದ್ವಿಚಕ್ರವಾಹನ ಪ್ರಕರಣಗಳಲ್ಲಿ 2 ಪ್ರಕರಣಗಳು ಪತ್ತೆಯಾಗಿದ್ದು, ಉಳಿದ ಮೂರು ವಾಹನಗಳ ವಾರಸುದಾರರ ಪತ್ತೆಕಾರ್ಯ ಮುಂದುವರೆದಿದೆ.

ನ.19ರಂದು ಸಂಜೆ 6 ಗಂಟೆಯಲ್ಲಿ ಗಾಯತ್ರಿನಗರದ ಅನಿಲ್‍ಕುಮಾರ್(23) ಎಂಬುವರು ತಮ್ಮ ಮನೆ ಮುಂದೆ ಹೊಂಡಾ ಆ್ಯಕ್ಟಿವಾ ಸ್ಕೂಟರ್‍ನ್ನು ನಿಲ್ಲಿಸಿದ್ದರು. ಕೆಲ ಸಮಯದ ಬಳಿಕ ನೋಡಿದಾಗ ಸ್ಕೂಟರ್ ನಾಪತ್ರೆಯಾಗಿತ್ತು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಶೋಧ ನಡೆಸುತ್ತಿದ್ದರು. 24ರಂದು ಸಂಜೆ ಸುಮಾರು 5.30ರ ಸುಮಾರಿನಲ್ಲಿ ಕ್ರೈಂ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಈ ವೇಳೆ ಹರಿಶ್ಚಂದ್ರ ಘಾಟ್ ಬಸ್ ನಿಲ್ದಾಣದ ಬಳಿ ಅನುಮಾನಸ್ಪದವಾಗಿ ದ್ವಿಚಕ್ರವಾಹನದಲ್ಲಿ ಬಂದ ಈತನನ್ನು ವಾಹನದ ದಾಖಲಾತಿಗಳನ್ನು ನೀಡಲು ಸೂಚಿಸಿದಾಗ, ಆರೋಪಿ ಬಳಿ ಯಾವುದೇ ದಾಖಲಾತಿಗಳು ಇಲ್ಲದಿರುವುದು ಗಮನಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಈತ ವಾಹನ ಕಳವು ಮಾಡಿರುವುದು ತಿಳಿದುಬಂದಿದೆ.


Spread the love

About Laxminews 24x7

Check Also

ಸಂಧ್ಯಾ ಸುರಕ್ಷಾ ಯೋಜನೆಯಿಂದ ಹಿರಿಯ ನಾಗರಿಕರಿಗೆ ಅನುಕೂಲಗಳು ಏನೇನು?

Spread the love ಬೆಂಗಳೂರು: ವಯಸ್ಸಾದ ವೃದ್ಧರಿಗೆ ಮಕ್ಕಳೇ ಆಸರೆ. ಆದರೂ, ಹಿರಿಯ ಜೀವಗಳಿಗೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಪ್ರತಿಯೊಂದಕ್ಕೂ ಮಕ್ಕಳನ್ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ