ನವದೆಹಲಿ : ಗುರುವಾರ ಬೆಳಿಗ್ಗೆ ದಕ್ಷಿಣ ದೆಹಲಿಯ ಪೊಲೀಸ್ ಠಾಣೆಗೆ ಅನಾಮಧೇಯ ಕರೆಯೊಂದು ಬಂದಿದ್ದು ಅದರಲ್ಲಿ ಮಾತನಾಡಿದ ವ್ಯಕ್ತಿ ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಕರೆ ಮಾಡಿದ್ದಾನೆ.
ಬೆದರಿಕೆ ಕರೆ ಬಂದ ಕೂಡಲೇ ಎಚ್ಚೆತ್ತ ಪೆÇಲೀಸ್ ಇಲಾಖೆ ಕರೆ ಬಂದ ಮೂಲಗಳನ್ನು ಪತ್ತೆ ಹಚ್ಚಲು ಶುರುಮಾಡಿದ್ದಾರೆ ಅಷ್ಟೂತ್ತಿಗೆ ಬೆದರಿಕೆ ಕರೆ ಬಂದಿದ್ದು ದೆಹಲಿಯ ದಕ್ಷಿಣಪುರಿ ಪ್ರದೇಶದಿಂದ ಎಂಬುದು ತಿಳಿದುಬಂದಿದೆ ಕೂಡಲೇ ಅಲ್ಲಿಗೆ ಹೋರಾಟ ಪೊಲೀಸರ ತಂಡ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ವ್ಯಕ್ತಿಯನ್ನು ನಿತಿನ್ ಎಂದು ಗುರುತಿಸಲಾಗಿದ್ದು ಪೆÇೀಲೀಸರ ಹೇಳಿಕೆಯಂತೆ ವ್ಯಕ್ತಿಯನ್ನು ಬಂಧಿಸುವ ಸಂದರ್ಭ ಮದ್ಯದ ನಶೆಯಲ್ಲಿದ್ದುದು ಕಂಡು ಬಂದಿದೆ, ಮದ್ಯದ ನಶೆಯಲ್ಲಿಯೇ ಬೆದರಿಕೆ ಹಾಕಿರುವುದಾಗಿ ವ್ಯಕ್ತಿ ತಪ್ಪು ಒಪ್ಪಿಕೊಂಡಿದ್ದಾನೆ. ತನಿಖೆಯನ್ನು ಮುಂದುವರೆಸಿದ ಪೊಲೀಸರು ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.