ಆಗಸ್ಟ್ 31ಕ್ಕೆ ಪವಿತ್ರಾ ಗೌಡಗೆ ಜಾಮೀನು.?
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಲೇ ಇದೆ. ಇನ್ನು ಈ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಪವಿತ್ರಾ ಗೌಡ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಇಂದ (ಆಗಸ್ಟ್ 28) ವಿಚಾರಣೆ ನಡೆಸಿದ ಬೆಂಗಳೂರು ಸಿಸಿಎಚ್ 57 ಕೊರ್ಟ್ ಮುಂದೂಡಿ ಆದೇಶ ನೀಡಿದೆ.
ಮಾಹಿತಿ ಇಲ್ಲಿದೆ ನೋಡಿ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಪವಿತ್ರಾ ಗೌಡಳ ಜಾಮೀನು ಅರ್ಜಿ ವಿಚಾರಣೆಯನ್ನು ಸಿಸಿಎಚ್ 57 ಕೊರ್ಟ್ ಆಗಸ್ಟ್ 31ಕ್ಕೆ ಮುಂದೂಡಿದೆ. ಪವಿತ್ರಗೌಡ ಪರ ವಕೀಲ ಟಾಮಿ ಸೆಬಾಸ್ಟಿಯನ್ ವಾದ ಮಂಡನೆ ಮಾಡಿದ್ದು, ಸರ್ಕಾರಿ ಪರ ವಕೀಲ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ವಾದ ಮಂಡಿಸಿದ್ದಾರೆ.
ಸರ್ಕಾರಿ ಪರ ವಾದ ಮಂಡನೆ ಮಾಡಿದ ಎಸ್‌ಪಿಪಿ ಪ್ರಸನ್ನ ಕುಮರ್ ವಾದ ಮಂಡನೆ ಮಾಡಿದ್ದು, ಈಗಾಗಲೇ ಜಾಮೀನು ನೀಡಬಾರದು ಎನ್ನುವುದಕ್ಕೆ ಕಾರಣಗಳನ್ನೂ ನೀಡಿದ್ದಾರೆ. “ಪಟ್ಟಣಗೆರೆ ಶಡ್‌ಗೆ ಬಂದವರ ಎಲ್ಲರ ಗುರುತು ಪತ್ತೆಯಾಗಿದೆ. ಅಲ್ಲಿನ ಸೆಕ್ಯೂರಿಟಿ ಗಾರ್ಡ್ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ. ಆತ ಎಲ್ಲರನ್ನು ಗುರುತು ಪತ್ತೆ ಮಾಡಿದ್ದಾನೆ,” ಎಂದು ವಾದ ಮಂಡನೆ ಮಾಡಿದ್ದಾರೆ.
‘ಈಗಾಗಲೇ ಎಫ್‌ಎಸ್‌ಎಲ್ ವರದಿಗಳು ಬಂದಿವೆ. ಆರೋಪಿಗಳು ಭಾಗಿಯಾಗಿರುವ ಬಗ್ಗೆ ಸಾಕ್ಷ್ಯಗಳು ಸಿಕ್ಕಿವೆ. ಬ್ಲಾಕ್ ಸ್ಕಾರ್ಫಿಯೋ ಕಾರಿನಲ್ಲಿ ದರ್ಶನ್, ಪವಿತ್ರ ಗೌಡ ಪಟ್ಟಣಗೆರೆ ಶೆಡ್‌ಗೆ ಬಂದಿರುವುದು ಸಹ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ ಎನ್ನಲಾಗಿದೆ. ತನಿಖೆ ಇನ್ನೂ ಪ್ರಗತಿಯಲ್ಲಿದೆ,” ಎಂದು ವಾದ ಮಾಡಿದ್ದಾರೆ.
ಆರೋಪಿಗಳು ಕೃತ್ಯ ನಡೆಸಿರುವುದು ಬಟಾ ಬಯಲಾಗಿದೆ. ಪವಿತ್ರಗೌಡ ಕೇವಲ ಮಹಿಳೆ ಅನ್ನುವ ಕಾರಣಕ್ಕೆ ಜಾಮೀನು ನೀಡಲು ಅಗುವುದಿಲ್ಲ. ಅವರು ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಸಾಕಷ್ಟು ಸಾಕ್ಷ್ಯಗಳಿವೆ. ಮಹಿಳೆಯರು ಹೀನಿಯಸ್ ಕ್ರೈಂನಲ್ಲಿ ಭಾಗಿಯಾದಾಗ ಜಾಮೀನು ನಿರಾಕರಿಸಿದ ಆದೇಶಗಳನ್ನು ಉಲ್ಲೇಖಿಸಿದ್ದಾರೆ