Breaking News

ನಗರಸಭೆ ಗದ್ದುಗೆಗೇರಲು ಕೈ-ಕಮಲ ಕಸರತ್ತು

Spread the love

ಮುಧೋಳ: ಮುಧೋಳ ನಗರಸಭೆ ಅಧಿಕಾರದ ಗದ್ದುಗೆ ಹಿಡಿಯಲು ಶತಾಯ ಗತಾಯ ಕಸರತ್ತು ನಡೆಸುತ್ತಿರುವ ಕೈ-ಕಮಲ ಕಲಿಗಳು ಅಧಿಕಾರಕ್ಕಾಗಿ ತಂತ್ರ-ಪ್ರತಿತಂತ್ರ ಹೆಣೆಯುತ್ತಿದ್ದಾರೆ. ಪ್ರಕಟಗೊಂಡಿರುವ ಮೀಸಲಾತಿ ಪ್ರಕಾರ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.Mudhol: ನಗರಸಭೆ ಗದ್ದುಗೆಗೇರಲು ಕೈ-ಕಮಲ ಕಸರತ್ತು

ಅಧಿಕಾರ ಹಿಡಿಯಲು ತೆರೆಮರೆಯ ಕಸರತ್ತು ನಡೆಸಿರುವ ಎರಡೂ ಪಕ್ಷಗಳ ಮುಖಂಡರು ನಗರಸಭೆ ಸದಸ್ಯರನ್ನು ವಿಶ್ವಾಸಕ್ಕೆ ಪಡೆಯಲು ಎಲ್ಲ ಬಗೆಯ ಪ್ರಯತ್ನಕ್ಕೆ ಮುಂದಾಗುತ್ತಿದ್ದಾರೆ.

31 ಸದಸ್ಯ ಬಲ: ಮುಧೋಳ ನಗರಸಭೆ ಒಟ್ಟು 31ಸದಸ್ಯ ಬಲ ಹೊಂದಿದ್ದು, ಶಾಸಕ-ಸಂಸದರ ಮತಗ ಳನ್ನು ಕ್ರೋಢೀಕರಿಸಿದರೆ 33ಮತಗಳು ಚುನಾವಣೆಯಲ್ಲಿ ಚಲಾವಣೆಗೊಳ್ಳಲಿವೆ. ಮೇಲ್ನೋಟದಲ್ಲಿ 16 ಸದಸ್ಯರು ಹಾಗೂ ಸಂಸದರ ಮತ ಸೇರಿ ಒಟ್ಟು 17 ಮತಗಳು ಬಿಜೆಪಿ ಪರ ಇದ್ದರೂ ಚುನಾವಣೆ ಘೋಷಣೆಯಾದಾಗಿನಿಂದ ಈ ಮತಗಳಲ್ಲಿ 3-4 ಮತಗಳು ವ್ಯತ್ಯಾಸವಾಗಲಿವೆ ಎಂಬ ಮಾತುಗಳು ಜೋರಾಗಿಯೇ ಹರಿದಾಡತೊಡಗಿವೆ. ಇನ್ನು 14 ನಗರಸಭೆ ಸದಸ್ಯರು, ಒಬ್ಬರು ಶಾಸಕರ ಮತ ಸೇರಿ ಕಾಂಗ್ರೆಸ್‌ ತೆಕ್ಕೆಯಲ್ಲಿ 15 ಮತಗಳಿವೆ. ಮ್ಯಾಜಿಕ್‌ ಸಂಖ್ಯೆ ದಾಟಲು ಬೇಕಾದ ಇನ್ನೂ ಎರಡು ಮತಗಳನ್ನು ಪಡೆಯಲು ಪಕ್ಷದ ಮುಖಂಡರು ರಣತಂತ್ರ ಹೆಣೆದಿದ್ದಾರೆ ಎನ್ನಲಾಗುತ್ತಿದೆ.

ಮೇಲುಗೈ ಸಾಧಿಸಲು ಕೊನೆಯ ದಿನ: ಆ.26ರಂದು ಚುನಾವಣೆ ನಿಗದಿಯಾಗಿದ್ದು, ಅಧಿಕಾರಕ್ಕಾಗಿ ಮೇಲುಗೈ ಸಾಧಿಸಲು ಒಂದೇ ದಿನ ಬಾಕಿ ಉಳಿದಿದೆ. ಚುನಾವಣೆ ಅಂಗಳದ ಮಾತುಗಳನ್ನು ಕೇಳಿದಾಗ ಕಾಂಗ್ರೆಸ್‌ ಪಕ್ಷದ ಸದಸ್ಯರ ಮೇಲೆ ಹಿಡಿತ ಹೊಂದಿದ್ದು ಅಧಿಕಾರ ಗದ್ದುಗೆ ಏರುವುದು ನಿಕ್ಕಿ ಎಂಬ ಮಾತುಗಳು ಹರಿದಾಡುತ್ತಿವೆ. ಇನ್ನು ಬಿಜೆಪಿ ಕಲಿಗಳು ಮಾತ್ರ ಸದಸ್ಯರನ್ನು ತಮ್ಮತ್ತ ಸೆಳೆಯಲು ನಿರಂತರ ಪರಿಶ್ರಮ ಪಡುತ್ತಿದ್ದು, ತಮ್ಮ ಕಾರ್ಯದಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತಾರೆ ಎಂಬುದರ ಫಲಿತಾಂಶ ಅರಿಯಲು ಸೋಮವಾರ ಮಧ್ಯಾಹ್ನದವರೆಗೆ ಕಾಯಬೇಕಿದೆ.

ಪ್ರತಿತಂತ್ರ ಹೆಣೆಯುತ್ತಿದೆ ಬಿಜೆಪಿ: ಸ್ಪಷ್ಟ ಬಹುಮತವಿದ್ದರೂ ಸದಸ್ಯರ ನಡುವಳಿಕೆಯಲ್ಲಿನ ವ್ಯತ್ಯಾಸದಿಂದ ಎಚ್ಚೆತ್ತಿರುವ ಬಿಜೆಪಿ ಮುಖಂಡರು ಸದಸ್ಯರನ್ನು ತಮ್ಮತ್ತ ಸೆಳೆಯಲು ಪ್ರತಿತಂತ್ರ ಹೆಣೆಯುತ್ತಿದ್ದಾರೆ. ಆ ಮೂಲಕ ಮೊದಲ ಅವ ಧಿಯಲ್ಲಿ ತನ್ನ ತೆಕ್ಕೆಯಲ್ಲಿದ್ದ ಅಧಿ ಕಾರವನ್ನು ತನ್ನಲ್ಲಿಯೇ ಉಳಿಸಿಕೊಳ್ಳಲು ಹವಣಿಸುತ್ತಿದೆ.


Spread the love

About Laxminews 24x7

Check Also

2 ವರ್ಷಗಳಿಂದ ಆರಂಭವಾಗದ ಶುದ್ಧ ನೀರಿನ ಘಟಕಗಳು

Spread the loveಹಾವೇರಿ: ನಗರದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಸಿಗಲಿ ಎಂದು ಶಾಸಕರ ಅನುದಾನದಲ್ಲಿ ಆರು ಶುದ್ಧ ಕುಡಿಯುವ ನೀರಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ