Breaking News

ಹೆಂಡ್ತಿ ರೀಲ್ಸ್​ ಹುಚ್ಚಾಟ ನೋಡಲಾಗದೇ ಹೊಡೆದು ಕೊಂದ ಗಂಡ

Spread the love

ಉಡುಪಿ, (ಆಗಸ್ಟ್ 23): ಸೋಶಿಯಲ್ ಮೀಡಿಯಾ ಮಿತವಾಗಿ ಬಳಸಿದ್ರೆ ಒಳ್ಳೆಯದು. ಅದರ ಬಳಕೆ ಅತಿಯಾದ್ರೆ ಸಂಸಾರದಲ್ಲಿ ಯಾವ ರೀತಿ ವಿರಸ ಮೂಡಿ, ಅದು ಮಹಾ ಅನಾಹುತಕ್ಕೆ ಕಾರಣ ಆಗುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆ. ಉಡುಪಿಯಲ್ಲಿ ಗಂಡನೊಬ್ಬ  ಹೆಂಡತಿಯನ್ನು ಹೊಡೆದು ಕೊಂದಿದ್ದಾನೆ. ಕಾರಣ ಆಕೆಯ ಸೋಶಿಯಲ್ ಮೀಡಿಯಾ ಹುಚ್ಚು. ಅದರಲ್ಲೂ ಇನ್ಸ್‌ಸ್ಟಾಗ್ರಾಮ್ ರೀಲ್ಸ್‌ನಲ್ಲಿ  ಆಕೆ ಹೆಚ್ಚು ಸಮಯ ಕಳೆಯುತ್ತಿದ್ದಳು ಎನ್ನುವ ಕ್ಷುಲ್ಲಕ ಕಾರಣ. ಇನ್ಸ್‌ಸ್ಟಾಗ್ರಾಮ್‌ನಲ್ಲಿ ಕೇವಲ 16 ಫಾಲೋವರ್ಸ್‌ ಹೊಂದಿದ್ದ ಪತ್ನಿ ರೀಲ್ಸ್ ಹುಚ್ಚಿಗೆ ಸಾವಿನ ಮನೆ ಸೇರಿದ್ದಾಳೆ. ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಾರ್ಕಡ ಪಡುಹೋಳಿ ಎಂಬಲ್ಲಿ ಘಟನೆ ನಡೆದಿದೆ. ಬೀದರ್ ಮೂಲದ ಜಯಶ್ರೀ, ತನ್ನ ಪತಿ ಕಿರಣ್ ಉಪಾಧ್ಯಾಯ ಕೈಯಲ್ಲೆ ಸಾವನ್ನಪ್ಪಿದ್ದು, ಈ ಸಂಬಂಧ ಪತಿಯನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.

ರೀಲ್ಸ್ ದುನಿಯಾಗೆ ಬೇಕಾಗಿರೋದು ಅಂದ ಚೆಂದ ಬಳುಕು ಮೈಮಾಟ, ವೈಯ್ಯಾರ, ಇಷ್ಟಿದ್ದು ಚಿಟಿಕೆಯಷ್ಟು ಪ್ರತಿಭೆ ಇದ್ರೂ ಸಾಕು . ರೀಲ್ಸ್ ದುನಿಯಾದಲ್ಲಿ ಅವರು ಮಹಾರಾಣಿಯರೇ. ಈ ಎಲ್ಲಾ ವೈಯ್ಯಾರಗಳಿದ್ದು ರೀಲ್ಸ್​ನಲ್ಲಿ ಮಿಂಚ್ದಿದ್ದ ಚೆಲುವೆ ಜಯಶ್ರೀ ಈಗ ಹೆಣವಾಗಿ ಹೋಗಿದ್ದಾಳೆ. ಆಕೆಯನ್ನು ಮುಗಿಸಿದವನು ಮದುವೆಯಾದ ಗಂಡನೇ ಹೆಸರು ಕಿರಣ್ ಉಪಾಧ್ಯಾಯ. ಮೊಬೈಲ್ ನಲ್ಲಿ ರೀಲ್ಸ್ ಮಾಡಿಕೊಂಡು ಜಾಲಿಯಾಗಿದ್ದ ನವ ಜೋಡಿಗಳಿಗೆ ಅದು ಏನಾಯಿತೋ ಗೊತ್ತಿಲ್ಲ. ನಿನ್ನೆ ರಾತ್ರಿ ಮೊಬೈಲ್ ಬಳಕೆ ವಿಚಾರವಾಗಿ ಪತಿ, ಪತ್ನಿ ಜಗಳವಾಡಿಕೊಂಡು ಗಲಾಟೆ ತಾರಕಕ್ಕೇರಿದ್ದಲ್ಲದೇ ಪತಿ ಪತ್ನಿಗೆ ಹೊಡೆದ ಪರಿಣಾಮ ಪತ್ನಿ ಸಾವನ್ನಪ್ಪಿದ ಘಟನೆ ಇಂದು ಬೆಳಿಗ್ಗೆ 4 ಗಂಟೆ ಸುಮಾರಿಗೆ ನಡೆದಿದೆ


Spread the love

About Laxminews 24x7

Check Also

ಚಿಕ್ಕೋಡಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕಛೇರಿ ಎದುರು ಕರವೇ ಪ್ರತಿಭಟನೆ

Spread the love ಚಿಕ್ಕೋಡಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕಛೇರಿ ಎದುರು ಕರವೇ ಪ್ರತಿಭಟನೆ ಗೋಕಾಕ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ