ಮನು ಭಾಕರ್ ಮತ್ತು ನೀರಜ್ ಚೋಪ್ರಾ ಭಾರತದ ಹೆಮ್ಮೆಯ ಕ್ರೀಡಾಪಟುಗಳು. ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಮನು ಭಾಕೆರ್ ಎರಡು ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದ ಮೊದಲ ಭಾರತದ ಕ್ರೀಡಾಪಟು ಎನಿಸಿಕೊಂಡಿದ್ದಾರೆ.
ಕಳೆದ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಈ ಬಾರಿ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
ಮನು ಭಾಕರ್ ಶೂಟಿಂಗ್‌ನಲ್ಲಿ ಎರಡು ಪದಕ ಗೆದ್ದರೆ, ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದುಕೊಟ್ಟರು. ಇವರಿಬ್ಬರು ಮದುವೆಯಾಗುತ್ತಾರೆ ಎನ್ನುವ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಈಗ ಸಖತ್ ಸದ್ದು ಮಾಡುತ್ತಿದೆ. ಅಭಿಮಾನಿಗಳು ಇವರಿಬ್ಬರು ಮದುವೆಯಾದರೆ ಚನ್ನಾಗಿರುತ್ತದೆ ಎಂದು ಕೂಡ ಹೇಳುತ್ತಿದ್ದಾರೆ.
ನೀರಜ್ ಚೋಪ್ರಾ-ಮನು ಭಾಕರ್ ಭೇಟಿ
ಒಲಿಂಪಿಕ್ ಪದಕ ವಿಜೇತರಿಬ್ಬರೂ ಪರಸ್ಪರ ಭೇಟಿಯಾಗಿದ್ದಾರೆ. ಸುಮ್ಮನೆ ಭೇಟಿಯಾಗಿದ್ದರೆ ಅಭಿಮಾನಿಗಳು ಕೂಡ ಏನೂ ಅಂದುಕೊಳ್ಳದೆ ಸುಮ್ಮನೆ ಇರುತ್ತಿದ್ದರು, ಆದರೆ ಇಬ್ಬರು ಭೇಟಿಯಾದಾಗ ಪರಸ್ಪರ ಮುಖ ಕೂಡ ನೋಡಿಕೊಳ್ಳದೆ ನಾಚಿಕೆಯಿಂದ ಇಬ್ಬರೂ ಮಾತನಾಡುತ್ತಿರುವುದು ಈಗ ಈ ಸುದ್ದಿ ಹಬ್ಬಲು ಕಾರಣವಾಗಿದೆ.