ಶಿವಮೊಗ್ಗ: ಬಿಜೆಪಿಯ 12 ಜನ ಸಭೆ ಬೆಳಗಾವಿಯಲ್ಲಿ ಸಭೆ ನಡೆಸಿದ್ದು ನನಗೆ ಆಘಾತವಾಗಿದೆ. ಇವರು ಸಂಘಟನೆಯಲ್ಲಿದ್ದವರು, ಪಕ್ಷವನ್ನು ಕಟ್ಟಿದ್ದಾರೆ.
ಏನೇನು ನೋವು ಅನುಭವಿಸಿದ್ದಾರೆಂದು ಅವರು ಹೇಳಿಕೊಂಡಿಲ್ಲ. ಅವರು ಪಾದಯಾತ್ರೆ ನಡೆಸುವುದಾಗಿ ಹೇಳಿದ್ದಾರೆ.
12 ಜನ ಮಾತ್ರ ಸಭೆ ನಡೆಸಿದ್ದಾರೆಂದು ಕೇಂದ್ರದ ನಾಯಕರು ತಾತ್ಸಾರ ಮಾಡಬಾರದು ಎಂದು ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಹೇಳಿದರು.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಬೆಳಗಾವಿಯ ನಂತರ ಬೆಂಗಳೂರಿನಲ್ಲಿ ಸಭೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಅವರು ಪಾದಯಾತ್ರೆ ನಡೆಸಿದರೆ ಗಲ್ಲಿ ಗಲ್ಲಿಗಳಲ್ಲಿ ಪಕ್ಷ ಎರಡಾಗುತ್ತದೆ. ಪ್ರತಿ ತಾಲೂಕಿನಲ್ಲಿ ಬಿಜೆಪಿ ಇಬ್ಭಾಗವಾಗುತ್ತದೆ ಎಂದರು.
Laxmi News 24×7