Breaking News

ಬಾಲಕಿಯರ ಮೆಟ್ರಿಕ್‌ ನಂತರದ ಹಾಸ್ಟೆಲ್‌ ಕಟ್ಟಡದ ಉದ್ಘಾಟನೆ ಯಾವಾಗ?

Spread the love

ಚಿಕ್ಕೋಡಿ: ಪಟ್ಟಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯರ ಮೆಟ್ರಿಕ್ ನಂತರದ ವಸತಿ ನಿಲಯದ ಕಟ್ಟಡ ಕಾಮಗಾರಿ ಮುಗಿದು ಒಂದು ವರ್ಷ ಕಳೆದಿದೆ. ಆದರೆ, ಅದಕ್ಕೆ ಇನ್ನೂ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ.

1997ರಲ್ಲಿ ಚಿಕ್ಕೋಡಿಗೆ ಈ ವಸತಿ ನಿಲಯ ಮಂಜೂರಾಯಿತು.

ಅಂದಿನಿಂದಲೂ ಪಟ್ಟಣದಲ್ಲಿ ಬೇರೆ ಬೇರೆ ಬಾಡಿಗೆ ಕಟ್ಟಡಗಳಲ್ಲಿ ಇದು ಕಾರ್ಯನಿರ್ವಹಿಸುತ್ತಿದೆ. ಇದರಿಂದಾಗಿ ಅಲ್ಲಿ ದಾಖಲಾಗುವ ಪಿಯುಸಿ ಹಾಗೂ ಪದವಿ ವಿದ್ಯಾರ್ಥಿನಿಯರಿಗೆ ತೊಂದರೆಯಾಗುತ್ತಿದೆ. ಹಾಸ್ಟೆಲ್‌ನಿಂದ ಕಾಲೇಜಿಗೆ ತೆರಳಲು ಸರಿಯಾಗಿ ಬಸ್‌ ಸೌಕರ್ಯವೂ ಇಲ್ಲದೆ ಪರದಾಡುವಂತಾಗಿದೆ.ಬಾಲಕಿಯರ ಮೆಟ್ರಿಕ್‌ ನಂತರದ ಹಾಸ್ಟೆಲ್‌ ಕಟ್ಟಡದ ಉದ್ಘಾಟನೆ ಯಾವಾಗ?

ಇದಕ್ಕೆ ಪರಿಹಾರ ಒದಗಿಸಲೆಂದು 2020-21ರಲ್ಲಿ ಕರ್ನಾಟಕ ಗೃಹ ನಿರ್ಮಾಣ ಮಂಡಳಿಯು ಪಟ್ಟಣದ ಹೊರವಲಯದಲ್ಲಿ ಅಗ್ನಿಶಾಮಕ ಕಚೇರಿಗೆ ಹೊಂದಿಕೊಂಡು ಕಟ್ಟಡ ನಿರ್ಮಿಸಿದೆ. ಒಂದು ಎಕರೆ ಪ್ರದೇಶದಲ್ಲಿ ₹3 ಕೋಟಿ ವೆಚ್ಚದಲ್ಲಿ ತಲೆ ಎತ್ತಿದ ಕಟ್ಟಡದ ಕಾಮಗಾರಿ 2023ರಲ್ಲೇ ಮುಗಿದಿದೆ.

ಆದರೆ, ‘ಒಳಚರಂಡಿ, ಆವರಣ ಗೋಡೆ, ಶುದ್ಧ ಕುಡಿಯುವ ನೀರು ಮತ್ತಿತರ ವ್ಯವಸ್ಥೆ ಕಲ್ಪಿಸದೆ ಕರ್ನಾಟಕ ಗೃಹ ನಿರ್ಮಾಣ ಮಂಡಳಿಯು ನಿರ್ವಹಣೆಗಾಗಿ ಇದನ್ನು ಹಸ್ತಾಂತರಿಸಲು ಮುಂದಾಗಿದೆ. ಹಾಗಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತನ್ನ ಅಧೀನಕ್ಕೆ ಪಡೆಯಲು ಮೀನಮೇಷ ಎಣಿಸುತ್ತಿದೆ’ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಕಾಮಗಾರಿ ಮುಗಿದು ಒಂದು ವರ್ಷವಾದರೂ ಬಳಕೆಯಾಗದ್ದರಿಂದ ನೂತನ ಕಟ್ಟಡ ಕಿಡಿಗೇಡಿಗಳಿಗೆ ಆಶ್ರಯ ತಾಣವಾಗುತ್ತಿದೆ. ಖಾಸಗಿ ಕಟ್ಟಡದಲ್ಲಿರುವ ವಸತಿ ನಿಲಯಕ್ಕೆ ಇಲಾಖೆಯು ಪ್ರತಿ ತಿಂಗಳು ಬಾಡಿಗೆ ಕಟ್ಟುತ್ತಿದ್ದು, ಸರ್ಕಾರಿ ಹಣ ವ್ಯರ್ಥವಾಗುತ್ತಿದೆ’ ಎನ್ನುವ ಆರೋಪ ಕೇಳಿಬರುತ್ತಿದೆ.


Spread the love

About Laxminews 24x7

Check Also

ಶಿರಗುಪ್ಪಿಯಲ್ಲಿ ರಕ್ತದಾನ ಶಿಬಿರ; ಡಾ.ಅಮೋಲ ಸರಡೆ ಅವರ ಕಾರ್ಯ ಶ್ಲಾಘನೀಯ: ರಾಜು ಕಾಗೆ..

Spread the loveಶಿರಗುಪ್ಪಿಯಲ್ಲಿ ರಕ್ತದಾನ ಶಿಬಿರ; ಡಾ.ಅಮೋಲ ಸರಡೆ ಅವರ ಕಾರ್ಯ ಶ್ಲಾಘನೀಯ: ರಾಜು ಕಾಗೆ.. ! ತಮ್ಮ ಹುಟ್ಟು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ