Breaking News

‘KSRTC’ಗೆ ಮತ್ತೊಂದು ಗರಿಮೆ

Spread the love

ಬೆಂಗಳೂರು: ಕರ್ನಾಟಕದ ಹೆಮ್ಮೆಯ ಕೆ ಎಸ್ ಆರ್ ಟಿಸಿಗೆ ಈಗಾಗಲೇ ಅನೇಕ ರಾಷ್ಟ್ರೀಯ ಪ್ರಶಸ್ತಿಗಳು ಬಂದಿವೆ. ರಾಜ್ಯದ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುತ್ತಿರುವಂತ ನಿಗಮಕ್ಕೆ, ಈಗ ಮತ್ತೊಂದು ಗರಿಮೆ ಸಂದಿದೆ. ಅದೇ ದೇಶದ ಲೀಡರ್ಸ್ ಆಫ್ ರೋಡ್ ಟ್ರಾನ್ಸಪೋರ್ಟ್ ಪ್ರಶಸ್ತಿ 2024 ಅನ್ನು ತನ್ನದಾಗಿಸಿಕೊಂಡಿದೆ.'KSRTC'ಗೆ ಮತ್ತೊಂದು ಗರಿಮೆ: ದೇಶದ 'ಲೀಡರ್ಸ್ ಆಫ್ ರೋಡ್ ಟ್ರಾನ್ಸಪೋರ್ಟ್ 2024'ರ ಪ್ರಶಸ್ತಿ

ಈ ಕುರಿತಂತೆ ನಿಗಮದವು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಕೆ.ಎಸ್.ಆರ್.ಟಿ.ಸಿ ಗೆ ಟಿವಿ-9 ನೆಟ್ವರ್ಕ್‌ ನ ದೇಶದ ಲೀಡರ್ಸ್ ಆಫ್ ರೋಡ್ ಟ್ರಾನ್ಸಪೋರ್ಟ್ ಪ್ರಶಸ್ತಿ-2024 ಬಂದಿದೆ. ನಿಗಮವು ಕೈಗೊಂಡಿರುವ ಬ್ರ್ಯಾಂಡಿಂಗ್ ಹಾಗೂ ಮಾನವ ಸಂಪನ್ಮೂಲ ಉಪಕ್ರಮಗಳಿಗಾಗಿ “ಟಿವಿ-9 ನೆಟ್ವರ್ಕ ಲೀಡರ್ಸ್ ಆಫ್ ರೋಡ್ ಟ್ರಾನ್ಸಪೋರ್ಟ್ 2024ರ ಪ್ರಶಸ್ತಿಯು ವರ್ಷದ ದೇಶದ ಅತ್ಯುತ್ತಮ ಸಂಸ್ಥೆ ವರ್ಗದಲ್ಲಿ ಲಭಿಸಿರುತ್ತದೆ ಎಂದು ತಿಳಿಸಿದೆ.

ದ ಇಂಪೀರಿಯಲ್ ಜನಪತ್ ಲೇನ್, ಜನಪತ್, ನವದೆಹಲಿ ಇಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹರ್ಷ್ ಮಲೋತ್ರ,ಮಾನ್ಯ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ರಾಜ್ಯ ಸಚಿವರು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವರು, ಭಾರತ ಸರ್ಕಾರರವರು ನಿಗಮಕ್ಕೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಡಾ. ನಂದಿನಿದೇವಿ ಕೆ. ಭಾಆಸೇ., ನಿರ್ದೇಶಕರು (ಸಿಬ್ಬಂದಿ ಮತ್ತು ಜಾಗೃತ), ಕೆ ಎಸ್ ಆರ್ ಟಿ ಸಿ ರವರು ಪ್ರಶಸ್ತಿಯನ್ನು ಸ್ವೀಕರಿಸಿದರು ಎಂದು ಹೇಳಿದೆ.


Spread the love

About Laxminews 24x7

Check Also

ಆರೋಪಿಗಳನ್ನು ಕರೆತರುವಾಗ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಪಿಎಸ್ಐ ಸಾವು

Spread the loveಬೆಂಗಳೂರು: ಪ್ರಕರಣವೊಂದರ ಆರೋಪಿಗಳನ್ನು ಬಂಧಿಸಿ ಕರೆತರುವಾಗ‌ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಪಿಎಸ್ಐ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ತಲಘಟ್ಟಪುರ ಠಾಣೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ