ಗದಗ, ಆಗಸ್ಟ್ 09: ಕೇಂದ್ರ ಸರ್ಕಾರ ಪ್ರತಿ ಗ್ರಾಮಗಳ ಮನೆ ಮನೆಗೆ ಕುಡಿಯುವ ನೀರು (water) ಪೂರೈಕೆ ಮಾಡುವ ಉದ್ದೇಶದಿಂದ ಜಲ ಜೀವನ ಮಷಿನ್ ಯೋಜನೆ (Jal Jeevan Yojana) ಜಾರಿ ಮಾಡಿದೆ.
ಇದು ಪ್ರಧಾನಿ ನರೇಂದ್ರ ಮೋದಿ ಅವ್ರ ಮಹತ್ವಾಕಾಂಕ್ಷಿ ಯೋಜನೆ. ಇದು ಗದಗ ಜಿಲ್ಲೆಯಲ್ಲಿ ಸಂಪೂರ್ಣ ಹಳ್ಳಹಿಡಿದಿದೆ. ರಾಜ್ಯದ ಪ್ರತಿಯೊಂದು ಮನೆಗೆ ಕುಡಿಯವ ನೀರು ಸಿಗಲಿ ಅಂತ ಕೇಂದ್ರ ಸರ್ಕಾರ ಕೋಟಿ ಕೋಟಿ ಅನುದಾನ ನೀಡಿದೆ.
ಆದ್ರೆ, ಕಾಮಗಾರಿ ಮುಗಿದು ಮೂರ್ನಾಲ್ಕು ವರ್ಷಗಳು ಕಳೆದ್ರೂ ಬಹುತೇಕ ಗ್ರಾಮಗಳ ಪೈಪ್ ನಲ್ಲಿ ಇನ್ನೂ ಹನಿ ನೀರು ಬರ್ತಾಯಿಲ್ಲ.
ಗದಗ ತಾಲೂಕಿನ ಚಿಕ್ಕಹಂದಿಗೋಳ, ಹುಯಿಲಗೋಳ ಗ್ರಾಮ ಸೇರಿದಂತೆ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ಮುಗಿದು ಹಲವು ವರ್ಷಗಳು ಕಳೆದಿವೆ. ಆದರೆ ನಲ್ಲಿಯಲ್ಲಿ ನೀರು ಬರುವ ಮುನ್ನವೇ ಪೈಪ್ ಗಳು ತುಕ್ಕು ಹಿಡಿದು ಯೋಜನೆ ಹಳ್ಳ ಹಿಡಿದು ಹೋಗಿವೆ.
ಇನ್ನೂ ಕೆಲ ಗ್ರಾಮಗಳಲ್ಲಿ ಅರ್ಧಮರ್ಧ ಪೈಪುಗಳ ಹಾಕಿ ಗುತ್ತಿಗೆದಾರರು ಎಸ್ಕೇಪ ಆಗಿದ್ದಾರೆ. ಪ್ರತಿ ಗ್ರಾಮಗಳಲ್ಲಿ ಮನೆ ಮನೆಗೆ ನೀರು ಕೊಡುವ ಯೋಜನೆ ಇದಾಗಿದೆ. ಅಷ್ಟೇ ಅಲ್ಲ ಪೈಪ್ ಹಾಕಲು ಇಡೀ ಗ್ರಾಮದಲ್ಲಿ ರಸ್ತೆ ಅಗೇದು ಹಾಳು ಮಾಡಿದ್ದಾರೆ.