Breaking News

ಪೂರ್ವ ದಿಕ್ಕಿನಿಂದ ಶತ್ರುಬಾಧೆ,ಪಂಚಮ ಶನಿಯ ಪ್ರಭಾವ

Spread the love

ಮೇಷ: ಸಾರ್ವಜನಿಕ ರಂಗದಲ್ಲಿ ದುಡಿಯುವ ವ್ಯಕ್ತಿಗಳಿಗೆ ಮಹತ್ವದ ಜವಾಬ್ದಾರಿ. ಏಕಕಾಲದಲ್ಲಿ ಅನೇಕ ಕಾರ್ಯಗಳ ನಿರ್ವಹಣೆ ಸಂಭವ. ಪರ್ಯಾಯ ಚಿಕಿತ್ಸೆಯಿಂದ ಹಳೆಯ ಸಮಸ್ಯೆಗೆ ಪರಿಹಾರ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ.

ವೃಷಭ: ಎಡ- ಬಲ ಗಮನಿಸಿ ಎಚ್ಚರಿಕೆಯಿಂದ ಮುಂದುವರಿದರೆ ಯಶಸ್ಸು.

ಉದ್ಯೋಗಸ್ಥರಿಗೆ ಪ್ರಗತಿ ಸ್ಥಿರ. ಆಪ್ತರಿಂದ ನಿರೀಕ್ಷಿತ ಸಹಾಯ ಸಕಾಲದಲ್ಲಿ ಕೈಸೇರಿ ಸಮಾಧಾನ. ಮನೆಯಲ್ಲಿ ಎಲ್ಲರ ಆರೋಗ್ಯ ಸಮಾಧಾನಕರ. ನೂತನ ವಾಹನ ಖರೀದಿಗೆ ಚಿಂತನೆ.

ಮಿಥುನ: ದಿಟ್ಟ ನಿರ್ಧಾರದಿಂದ ಮುನ್ನಡೆದರೆ ಯಶಸ್ಸು ಖಂಡಿತ. ಎಂತಹ ಸನ್ನಿವೇಶವನ್ನೂ ಎದುರಿಸುವ ಮನೋಬಲ ನಿಮಗಿದೆ. ಪ್ರಾಮಾಣಿಕ ಅಧಿಕಾರಿಗಳ ಸತ್ವಪರೀಕ್ಷೆ .ಪೂರ್ವ ದಿಕ್ಕಿನಿಂದ ಶತ್ರುಬಾಧೆ. ವೃತ್ತಿಪರರಿಗೆ ಹೆಚ್ಚು ಜವಾಬ್ದಾರಿ.

ಕರ್ಕಾಟಕ: ಭವಿಷ್ಯದ. ಕುರಿತು ಅತಿಯಾಗಿ ಚಿಂತಿಸದಿರಿ. ಮಿಶ್ರಫಲಗಳ ದಿನವಾಗಿದ್ದರೂ ಶುಭ ಫಲಗಳೇ ಅಧಿಕ. ಉದ್ಯೋಗಸ್ಥರಿಗೆ ಉತ್ತೇಜನದ ವಾತಾವರಣ. ಸ್ವಂತ ಉದ್ಯಮಕ್ಕೆ ಪಂಥಾಹ್ವಾನಗಳು ಎದುರಾದರೂ ಸುಲಭವಾಗಿ ಎದುರಿಸಲು ಸಾಧ್ಯವಾಗುವುದು.

ಸಿಂಹ: ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ. ಉದ್ಯೋಗ ಕ್ಷೇತ್ರದಲ್ಲಿ ಸರ್ವರ ಪ್ರಶಂಸೆಗೆ ಪಾತ್ರರಾಗುವ ಯೋಗವಿದೆ. ಸ್ವಂತ ವ್ಯವಹಾರದಲ್ಲಿ ಅಭೂತಪೂರ್ವ ಯಶಸ್ಸು. ಆಪ್ತಮಿತ್ರರಿಗೆ ಸಹಾಯ ಮಾಡುವ ಅವಕಾಶ.

ಕನ್ಯಾ: ಎಲ್ಲ ವ್ಯವಹಾರಗಳೂ ನಿರೀಕ್ಷೆಯಂತೆ ನಡೆಯುತ್ತವೆ. ಉದ್ಯೋಗ ರಂಗದಲ್ಲಿ ನಿರಾತಂಕದ ಮುನ್ನಡೆ. ಸ್ವಂತ ವ್ಯವಹಾರಸ್ಥರಿಗೆ ನಿರೀಕ್ಷಿತ ವಲಯಗಳಿಂದ ಸಕಾಲಿಕ ನೆರವು.ಲೆಕ್ಕ ಪರಿಶೋಧಕರಿಗೆ ಸಮಯದ ಒತ್ತಡ.

ತುಲಾ: ಪಂಚಮ ಶನಿಯ ಪ್ರಭಾವ ಇದ್ದರೂ ಅಂಜಬೇಕಾಗಿಲ್ಲ. ದೇವತಾರ್ಚನೆ, ಧಾರ್ಮಿಕ ಗ್ರಂಥಗಳ ಅಧ್ಯಯನದಲ್ಲಿ ಆಸಕ್ತಿ. ಹತ್ತಿರದ ದೇವತಾ ಸಾನ್ನಿಧ್ಯ ಸಂದರ್ಶನ. ಬಂಧುವರ್ಗದಲ್ಲಿ ವಿವಾಹದ
ಸಂಭ್ರಮ. ಉದ್ಯೋಗ, ವ್ಯವಹಾರಗಳಲ್ಲಿ ಸುಧಾರಣೆ

ವೃಶ್ಚಿಕ: ಅಪೇಕ್ಷಿಸಿದಷ್ಟು ಅಲ್ಲದಿದ್ದರೂ ಸಾಕಷ್ಟು ಪ್ರಮಾಣದಲ್ಲಿ ಪ್ರಗತಿ. ಉದ್ಯೋಗ ರಂಗದಲ್ಲಿ ಪ್ರತಿಭೆ ತೋರಿಸಲು ಅವಕಾಶ. ವ್ಯವಹಾರ ಕ್ಷೇತ್ರದಲ್ಲಿ ಪೈಪೋಟಿ. ಪೂರ್ವದಿಕ್ಕಿನಿಂದ ಶುಭವಾರ್ತೆ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಕ್ಷೇಮ.

ಧನು: ಉದ್ದೇಶಿತ ಕಾರ್ಯ ನಿರ್ವಿಘ್ನವಾಗಿ ಮುಕ್ತಾಯ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ. ಹಿರಿಯರ ಮತ್ತು ಗೃಹಿಣಿಯರ ಸ್ವಾವಲಂಬನೆ ಯತ್ನಕ್ಕೆ ಯಶಸ್ಸು. ಉದ್ಯೋಗ ಕ್ಷೇತ್ರದಲ್ಲಿ ಕಾರ್ಯ ಸಾಮರ್ಥ್ಯ ವೃದ್ಧಿಗೆ ಪ್ರಯತ್ನ.

ಮಕರ: ಅನಿರೀಕ್ಷಿತ ಬೆಳವಣಿಗೆಗಳಿಂದ ಆತಂಕ ಗೊಳ್ಳಬೇಡಿ. ಮನೆಯಲ್ಲಿ ಹೆಚ್ಚುಕಡಿಮೆ ಎಲ್ಲರ ಆರೋಗ್ಯ ಉತ್ತಮ. ಖಾಸಗಿ ರಂಗದ ಉದ್ಯೋಗಸ್ಥರಿಗೆ ಕೆಲಸದ ಒತ್ತಡ. ಲೆಕ್ಕಪರಿಶೋಧಕರು, ಮೊದಲಾದ ವೃತ್ತಿಪರರಿಗೆ ಸಮಯ ಮಿತಿಯ ಒತ್ತಡ.

ಕುಂಭ: ಒಂದು ಬಗೆಯಲ್ಲಿ ನಿರಾತಂಕದ ದಿನ. ಉದ್ಯೋಗ ರಂಗದಲ್ಲಿ ಅಬಾಧಿತ ಮುನ್ನಡೆ. ವ್ಯವಹಾರ ಕ್ಷೇತ್ರ ವಿಸ್ತರಣೆಗೊಳ್ಳುವ ಸೂಚನೆ. ಸಮಾಜದಲ್ಲಿ ವಿಶೇಷ ಗೌರವ ಪ್ರಾಪ್ತಿ. ಅಭಿವೃದ್ಧಿ ಕಾರ್ಯಗಳಿಗೆ ಎಲ್ಲರ
ಸಹಕಾರ.ಬಂಧುವರ್ಗದಲ್ಲಿ ಶುಭಕಾರ್ಯ. ಹಿರಿಯರು, ಗೃಹಿಣಿಯರಿಗೆ ಉಲ್ಲಾಸ.

ಮೀನ: ಏಳೂವರೆ ಶನಿಯ ಪ್ರಭಾವವಿದ್ದರೂ ಧರ್ಮ ನಿಷ್ಠೆಯಿಂದಾಗಿ ಶುಭಫಲಗಳೇ ಅಧಿಕ. ವಾಹನ ಸಂಬಂಧ ವ್ಯವಹಾರಸ್ಥರಿಗೆ ಸ್ಥಿರವಾದ ಆದಾಯ.ಸಂಗಾತಿಯಿಂದ ನಿತ್ಯದ ವ್ಯವಹಾರಗಳಿಗೆ ಸಕ್ರಿಯ ಸಹಕಾರ. ತಾಯಿಯ, ಮಾತೃಸಮಾನರ ಆರೋಗ್ಯ ಉತ್ತಮ. ಹತ್ತಿರದ ಕ್ಷೇತ್ರ ದರ್ಶನ ಸಂಭವ.


Spread the love

About Laxminews 24x7

Check Also

ಆನ್‌ಲೈನ್ ಗೇಮಿಂಗ್ ಪ್ರಚಾರ-ನಿಯಂತ್ರಣ ಕಾಯಿದೆ ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ: ಆ.30ಕ್ಕೆ ವಿಚಾರಣೆ

Spread the love ಬೆಂಗಳೂರು: ಹಣವನ್ನು ಪಣಕ್ಕಿಟ್ಟು ಆಡುವಂತಹ ಆನ್‌ಲೈನ್​ ಗೇಮ್​ಗಳಿಗೆ ನಿಷೇಧ ಹೇರುವುದಕ್ಕೆ ಅವಕಾಶ ಕಲ್ಪಿಸುವ ಆನ್‌ಲೈನ್ ಗೇಮಿಂಗ್ ಪ್ರಚಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ