ಬೆಳಗಾವಿ : ಬೆಂಗಳೂರಿನ ಕಸ್ತೂರಬಾ ನಗರದ ಯುವತಿ ಪ್ರಿಯಾಂಕಾ(24) ಬೆಳಗಾವಿಯ ಅಲಾರವಾಡ ಗ್ರಾಮದ ರಾಹುಲ್ ಎಂಬ ಯುವಕ ಇನ್ ಸ್ಟಾಗ್ರಾಂನಲ್ಲಿ ಪರಿಚಯವಾಗಿ ಪರಿಚಯ ಪ್ರೀತಿಗೆ ತಿರುಗಿ ಈಗ ಮದುವೆಯಾಗಿದ್ದ ಸುದ್ದಿ ನಿನ್ನೆ ವೈರಲ್ ಆಗಿತ್ತು.
ಆದರೆ ಸಧ್ಯ ಈ ಪ್ರಕರಣ ಮತ್ತೊಂದು ಸ್ವರೂಪ ಪಡೆದುಕೊಂಡಿದೆ. ಸೋಶಿಯಲ್ ಮೀಡಿಯಾದಲ್ಲಿ ಪ್ರಾರಂಭವಾದ ಪ್ರೀತಿ ಮದುವೆಗೆ ಬಂದು ನಿಂತಿತ್ತು. ನಿನ್ನೆಯಷ್ಟೇ ಯುವತಿ ಹಾಗೂ ಬೆಳಗಾವಿ ಯುವಕನ ಜೊತೆ ಮದುವೆಯಾಗಿತ್ತು.