ಬೆಳಗಾವಿ: ನವದೆಹಲಿಯಲ್ಲಿ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಭೇಟಿಯಾಗಿ, ವಿವಿಧ ಕಾಮಗಾರಿಗಳ ಕುರಿತು ಚರ್ಚಿಸಿದರು.
‘ಅಥಣಿ ತಾಲ್ಲೂಕಿನ ಮುರಗುಂಡಿಯಿಂದ ಕಾಗವಾಡ, ಚಿಕ್ಕೋಡಿ ಮಾರ್ಗವಾಗಿ ಗೋಟೂರವರೆಗೆ (87 ಕಿ.ಮೀ) ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ಶಿರಗುಪ್ಪಿಯಿಂದ ಅಂಕಲಿಯವರೆಗೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಮಂಜೂರುಗೊಳಿಸಿರುವುದು ಸ್ವಾಗತಾರ್ಹ.
ಈ ಕಾಮಗಾರಿ ಬೇಗ ಆರಂಭಿಸಬೇಕು’ ಎಂದು ಕೋರಿದರು.
‘ನವೀಕರಿಸಬಹುದಾದ ಎಥೆನಾಲ್ ಬಳಕೆಯಿಂದ ರೈತರಿಗೆ ಆರ್ಥಿಕವಾಗಿ ಸದೃಢವಾಗಲು ಸಾಧ್ಯವಿದೆ. ಹಾಗಾಗಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಬಳಸುವ ಘಟಕಗಳು ಭಾರತ ಮತ್ತು ಕರ್ನಾಟಕದಲ್ಲಿ ರೂಪುಗೊಳ್ಳಬೇಕು’ ಎಂದು ಮನವಿ ಮಾಡಿದರು. ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ ಇದ್ದರು