ಬೆಂಗಳೂರು, ಜುಲೈ 19: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಳೆದ 10 ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ ಉಪನದಿಗಳು ಅವುಗಳಿಗೆ ಅಡ್ಡಲಾಗಿ ನಿರ್ಮಿಸಿರುವ ಜಲಾಶಯಗಳಲ್ಲಿ ಅತ್ಯಧಿಕ ನೀರು ಸಂಗ್ರಹವಾಗಿದೆ. ಈ ಪೈಕಿ ಹೇಮಾವತಿ ಜಲಾಶಯದಲ್ಲೂ ಸಹ ಅತ್ಯಧಿಕ ಒಳಹರಿವು ದಾಖಲಾಗಿದೆ.
ಇಂದು ಜುಲೈ 19ರಂದು ನೀರಿನ ಸಂಗ್ರಹ ಮಟ್ಟ ಎಷ್ಟಿದೆ, ಅಪ್ಡೇಟ್ ಮಾಹಿತಿ ಇಲ್ಲಿದೆ.
ಹೇಮಾವತಿ ನದಿಯು ಕಾವೇರಿ ಉಪನದಿಗಳಲ್ಲಿ ಒಂದಾಗಿದೆ. ಈ ನದಿಗೆ ಹಾಸನ ಜಿಲ್ಲೆಯ ಗೂರೂರು ಗ್ರಾಮದ ಬಳಿ ಜಲಾಶಯ ನಿರ್ಮಿಸಲಾಗಿದೆ. ಕರಾವಳಿ ಹಾಗೂ ಪಶ್ಚಿಮ ಘಟ್ಟಗಳ ಕಾಡು, ಕಣಿವೆಗಳಲ್ಲಿ ಕಳೆದ ಒಂದು ವಾರದಿಂದ ಹೆಚ್ಚು ಕಾಲ ಮಳೆ ಆರ್ಭಟಿಸುತ್ತಿದೆ. ನದಿ, ಕೊಳಗಳು ತುಂಬಿ ಹರಿಯುತ್ತಿವೆ. ಮುಂಗಾರು ಎಲ್ಲೆಡೆ ಆರ್ಭಟಿಸುತ್ತಿದೆ. ಕೊಡಗು, ಮಡಿಕೇರಿ, ಸೋಮವಾರಪೇಟೆ, ಮೈಸೂರು ಭಾಗಗಳಲ್ಲಿ ಜೋರು ಮಳೆಗೆ, ರಸ್ತೆಗಳು ಜಲಾವೃತಗೊಂಡಿವೆ. ರಸ್ತೆ ಸೇತುವೆಗಳು ನದಿಯ ರಭಕ್ಕೆ ಕೊಚ್ಚಿ ಹೋಗುತ್ತಿರುವುದು ಸಾಮಾನ್ಯ ಎಂಬಂತಾಗಿದೆ.
Laxmi News 24×7