ಬೆಂಗಳೂರು ಮಂಗಳುರು ವಿಶ್ವವಿದ್ಯಾಲಯದಲ್ಲಿ ‘ಕುಂದ ಕನ್ನಡ ಭಾಷೆಯ ಅಧ್ಯಯನ ಪೀಠ’ ಸ್ಥಾಪನೆಗೆ 50 ಲಕ್ಷ ರೂ.ಗಳನ್ನು ರಾಜ್ಯ ಸರ್ಕಾರವು ಬಿಡುಗಡೆ ಮಾಡಿದೆ.
ಪೀಠ ಸ್ಥಾಪನೆಗೆ 2022ರ ಮೇ 16ರಂದು ನಡೆದಿದ್ದ ಮಂಗಳೂರು ವಿವಿ ಸಿಂಡಿಕೇಟ್ ಸಭೆಯಲ್ಲಿ ವಿವಿ ಆಂತರಿಕ ಸಂಪನ್ಮೂಲದಿಂದ ಅಧ್ಯಯನ ಪೀಡ ಸ್ಥಾಪಿಸಲು 25 ಲಕ್ಷ ರೂ.ಗಳನ್ನು ಮೀಸಲಿಡಲು ನಿರ್ಣಯಿಸಲಾಗಿತ್ತು.
ಬಳಿಕ ವಿವಿಗಳ ಅಧ್ಯಯನ ಪೀಠಗಳನ್ನು ಸ್ಥಾಪಿಸುವ ಮತ್ತು ಪೀಠಗಳ ಸಂಖ್ಯೆಯನ್ನು ನಿರ್ಧರಿಸುವ ಸಂಬಂಧ ಕಾರ್ಯ ನೀತಿಯನ್ನು ರೂಪಿಸುವ ಬಗ್ಗೆ ಉನ್ನತ ಶಿಕ್ಷಣ ಪರಿಷತ್ತಿಗೆ ತಿಳಿಸಲಾಗಿದೆ. ಉನ್ನತ ಶಿಕ್ಷಣ ಪರಿಷತ್ತು ತಜ್ಞರ ಸಮಿತಿ ರಚಿಸಿ ಅವರಿಂದ ವರದಿ ಪಡೆದಿದ್ದು, ಅನುಮೋದನೆ ನೀಡಿದೆ.
ವಿಶ್ವವಿದ್ಯಾಲಯಗಳ ಅಭಿವೃದ್ಧಿ ಅನುದಾನ 103ರಡಿ 8.5 ಕೋಟಿ ರೂ.ಗಳನ್ನು ಮಂಗಳೂರು ವಿವಿಗೆ ನೀಡಿದೆ. ಇದರಲ್ಲಿ 50 ಲಕ್ಷ ರೂ.ಗಳನ್ನು ಅಧ್ಯಯನ ಪೀಠ ಸ್ಥಾಪನೆಗೆ ಬಿಡುಗಡೆಗೊಳಿಸುವಂತೆ ತಿಳಿಸಲಾಗಿದೆ.