Breaking News

ಹೊಸ ರೇಷನ್ ಕಾರ್ಡ್​​​ಗೆ ಅರ್ಜಿ ಸಲ್ಲಿಸಲು ಅವಕಾಶ

Spread the love

ಬೆಂಗಳೂರು, : ಒಂದು ವರ್ಷದ ಬಳಿಕ ಆಹಾರ ಇಲಾಖೆ ಬಿಪಿಎಲ್ ಫಲಾನುಭವಿಗಳಿಗೆ ಗುಡ್ ನ್ಯೂಸ್ ಕೊಟ್ಟಿದೆ. ಹೊಸ ಬಿಪಿಎಲ್ ಕಾರ್ಡ್​​ಗಳಿಗೆ ಅರ್ಜಿ ಸಲ್ಲಿಸಲು ಆಹಾರ ನಾಗರೀಕ ಸರಬರಾಜು ಇಲಾಖೆ ಅನುಮತಿ ನೀಡಿದೆ. ಸದ್ಯ ಆಹಾರ ನಾಗಾರೀಕ ವೆಬ್​ಸೈಟ್ ahara.kar.nic.in ರಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು, ಮೊಬೈಲ್, ಕಂಪ್ಯೂಟರ್, ಸೇವಾಸಿಂಧು ಪೋರ್ಟಲ್​​ಗಳಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ರೇಷನ್ ಕಾರ್ಡ್​​ಗಳ ತಿದ್ದುಪಡಿಗೂ ಇದೆ ಅವಕಾಶ

ಇನ್ನು ಬಿಪಿಎಲ್, ಎಪಿಎಲ್, ತುರ್ತು ಆರೋಗ್ಯ ಸಂಬಂಧ ಬಿಪಿಎಲ್ ಕಾರ್ಡ್ ಅರ್ಜಿಗೆ ಸಮಯ ನಿಗದಿ ಮಾಡಿದ್ದು, ಬೆಳಗ್ಗೆ 10 ರಿಂದ ಸಂಜೆ 7 ರವರೆಗೆ ಅರ್ಜಿ ಸಲ್ಲಿಕೆ ಅವಕಾಶ ನೀಡಿದೆ. ಇದರ ಜೊತೆಗೆ ರೇಷನ್ ಕಾರ್ಡ್​​ಗಳ ತಿದ್ದುಪಡಿಗೂ ಅವಕಾಶ ನೀಡಿದ್ದು‌, ಬೆಂಗಳೂರು ಒನ್ ಸೆಂಟರ್​​ಗಳಿಗೆ ಫಾಲನುಭವಿಗಳು ಆಗಮಿಸುತ್ತಿದ್ದಾರೆ.

ಒಪನ್ ಆಗದ ವೆಬ್​​ಸೈಟ್ಬಿಪಿಎಲ್ ಕಾರ್ಡ್ ಇಲ್ಲದವರಿಗೆ ಶುಭ ಸುದ್ದಿ: ಹೊಸ ರೇಷನ್ ಕಾರ್ಡ್​​​ಗೆ ಅರ್ಜಿ ಸಲ್ಲಿಸಲು ಅವಕಾಶ

ಒಂದು ವರ್ಷದ ಬಳಿಕ ರೆಷಾನ್ ಕಾರ್ಡ್​​ಗಳಿಗೆ ಅರ್ಜಿ ಸಲ್ಲಿಸಲು ಅನುಮತಿ ಕೊಟ್ಟಿರುವ ಕಾರಣ ಫಲಾನುಭವಿಗಳು ಬೆಂಗಳೂರು ಒನ್ ಸೆಂಟರ್​​ಗಳಿಗೆ ಧಾವಿಸುತ್ತಿದ್ದಾರೆ. ಆದರೆ ವೆಬ್​ಸೈಟ್ ಒಪನ್ ಆಗುತ್ತಿದ್ದು, ಅರ್ಜಿ‌ ಮಾತ್ರ ರವಾನೆಯಾಗುತ್ತಿಲ್ಲ.‌ ಹೀಗಾಗಿ ಆಹಾರ ನಾಗಾರೀಕ ಸರಬರಾಜು ಇಲಾಖೆಯ ವಿರುದ್ದ ಫಾಲಾನುಭವಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟಿದ್ದೇವೆ ಎಂದು ಹೇಳಿ ಜನರನ್ನ ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ಆಹಾರ ಇಲಾಖೆ ಅಧಿಕಾರಿಗಳು ಏನಯ ಮಾಡುತ್ತಿದ್ದಾರೆ. ಪರ್ಮಿಷನ್ ಕೊಟ್ಟಿದ್ದಾರೆ ಅಂತ ಎಸಿ ರೋಮ್‌ನಲ್ಲಿ ಸುಮ್ಮನೆ ಕುಳಿತುಕೊಂಡರೆ ಇಲ್ಲಿನ ಸಮಸ್ಯಗಳನ್ನು ಬಗೆಹರಿಸುವುದು ಯಾರು? ತಿದ್ದಪಡಿಗೆ ಒಂದು ವಾರ ಅಲೆದಿದ್ದೇವೆ. ಇದೀಗ ಅರ್ಜಿ ಸಲ್ಲಿಸಲು ಅಲೆದಾಡುವ ಪರದಾಡುವ ಪರಿಸ್ಥಿತಿ ಎದುರಾಗಿದೆ. ನಮ್ಮ ಸಮಸ್ಯೆಗಳನ್ನು ಯಾರು ಆಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ಡಿಕೆಶಿ-ಸಿದ್ದರಾಮಯ್ಯ ಬಣಗಳ ಮುಖಂಡರ ನಡುವೆ ಪರಸ್ಪರ ವಾಕ್ಸಮರ

Spread the loveತುಮಕೂರು: ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ಡಿಕೆಶಿ ಬಣ vs ಸಿದ್ದರಾಮಯ್ಯ ಬಣಗಳ ನಡುವಿನ ಜಟಾಪಟಿ ಜೋರಾಗಿದ್ದು, ಭಾರೀ ಚರ್ಚೆಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ