ಬೆಳಗಾವಿ: ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರನ ಹೇಳಿಕೆ ಪಡೆಯಲು, ಎಸ್.ಐ.ಟಿ ತಂಡವು ಇಲ್ಲಿನ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿತು ಎಂದು ಮೂಲಗಳು ಖಚಿತಪಡಿಸಿವೆ.
‘ಈ ಹಗರಣದಲ್ಲಿ ಬಂದಿಖಾನೆ ಇಲಾಖೆ ಡಿಐಜಿ ಟಿ.ಪಿ. ಶೇಷ ಭಾಗಿಯಾದ ಬಗ್ಗೆ ನಾಗೇಂದ್ರ ಅಲಿಯಾಸ್ ನಾಗ ಎಂಬ ಕೈದಿ ಎಡಿಜಿಪಿ ಅವರಿಗೆ ಜೂನ್ 26ರಂದು ದೂರು ನೀಡಿದ್ದ. ಈ ಕೈದಿ ಈಗ ಇಲ್ಲಿನ ಹಿಂಡಲಗಾ ಜೈಲಿನಲ್ಲಿದ್ದ ಕಾರಣ ತನಿಖಾಧಿಕಾರಿಗಳು ವಿಚಾರಣೆ ನಡೆಸಿದರು.
ದೂರಿನ ಅರ್ಜಿ ಇಟ್ಟುಕೊಂಡು ಮೂರು ಗಂಟೆ ಕೈದಿಯ ವಿಚಾರಣೆ ನಡೆಸಿದ ತಂಡವು ಹೇಳಿಕೆ ದಾಖಲಿಸಿಕೊಂಡಿತು.
‘ಶೇಷ ಅವರು ಹ್ಯಾಕರ್ ಶ್ರೀಕೆಗೆ ಲ್ಯಾಪ್‌ಟಾಪ್ ನೀಡಿ ₹20 ಕೋಟಿ ಮೌಲ್ಯದ ಬಿಟ್‌ಕಾಯಿನ್ ವರ್ಗಾವಣೆ ಮಾಡಿಸಿದ್ದಾರೆ” ಎಂಬುದು ನಾಗೇಂದ್ರ ದೂರು.