Breaking News

ಕಲ್ಯಾಣ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟವಾಗಲಿ: ಶ್ರೀಧರ ಬಳಿಗಾರ

Spread the love

ಕಲ್ಯಾಣ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟವಾಗಲಿ: ಶ್ರೀಧರ ಬಳಿಗಾರ

ಳಿಯಾಳ: ‘ಕಲ್ಯಾಣ ರಾಜ್ಯ ಎಂಬುದು ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು. ಕಾವ್ಯ ರಚನೆಯ ಮೂಲಕ ಕಲ್ಯಾಣ ರಾಜ್ಯ ನಿರ್ಮಾಣವಾಗಬೇಕು. ರಾಜ ಮಾರ್ಗವು ಸಾಂಸ್ಕೃತಿಕ ಅಂತಃಕರಣದಿಂದ ಕೂಡಿರಬೇಕು’ ಎಂದು ಸಾಹಿತ್ಯ ಅಕಾಡೆಮಿಯ ಸಾಮಾನ್ಯ ಸಲಹಾ ಮಂಡಳಿಯ ಸದಸ್ಯರಾದ ಶ್ರೀಧರ ಬಳಿಗಾರ ಹೇಳಿದರು.

ಕಲ್ಯಾಣ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟವಾಗಲಿ: ಶ್ರೀಧರ ಬಳಿಗಾರ

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಹಿತ್ಯ ಅಕಾಡೆಮಿ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಮಂಗಳವಾರ ನಡೆದ ಕಾವ್ಯ ಮತ್ತು ಕಲ್ಯಾಣ ರಾಜ್ಯ ಸಾಹಿತ್ಯ ವೇದಿಕೆ ಕಾರ್ಯಕ್ರಮದಲ್ಲಿ ‘ಕಾವ್ಯದಲ್ಲಿ ರಾಜಕೀಯ ಪ್ರಜ್ಞೆ’ ಕುರಿತು ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ನಾಗರೇಖಾ ಗಾಂವಕರ, ‘ಕನ್ನಡ ಕಾವ್ಯದ ಇತ್ತೀಚಿನ ಪ್ರವೃತ್ತಿಗಳು’ ಕುರಿತು ಮಾತನಾಡಿ, ಕಾವ್ಯ ಶ್ರೇಷ್ಠತೆಯ ವ್ಯಸನವನ್ನು ಕಡಿಮೆ ಮಾಡಬೇಕು. ಕಾವ್ಯ ನಿರ್ದಿಷ್ಟ ಮಾರ್ಗದಲ್ಲಿ ರಚನೆಯಾಗಬೇಕು ಎಂದರು.

ಪ್ರಾಚಾರ್ಯ ಚಂದ್ರಶೇಖರ್ ಲಮಾಣಿ ಅಧ್ಯಕ್ಷತೆ ವಹಿಸಿ, ಚನ್ನಪ್ಪ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷ ಸುಮಂಗಲಾ ಅಂಗಡಿ, ಕನ್ನಡ ಬರಹಗಾರರಾದ ಮಾರ್ತಾಂಡಪ್ಪ ಕತ್ತಿ ಅತಿಥಿಗಳಾಗಿ ಪಾಲ್ಗೊಂಡಿದ್ದರು.


Spread the love

About Laxminews 24x7

Check Also

ಹಾಸನಾಂಬೆಯ ದಾಖಲೆಯ ದರ್ಶನ: ಒಂದೇ ದಿನ 3.10 ಲಕ್ಷ ಭಕ್ತರ ಆಗಮನ

Spread the loveಹಾಸನ: ಈ ವರ್ಷ ಹಾಸನಾಂಬೆ ದೇವಾಲಯಕ್ಕೆ ಒಂದು ವಾರದಲ್ಲಿ 13.89 ಲಕ್ಷ ಭಕ್ತರು ಹರಿದುಬಂದಿದ್ದು, ಶುಕ್ರವಾರ ಒಂದೇ ದಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ