ಹೊಸದಿಲ್ಲಿ: ನರೇಂದ್ರ ಮೋದಿ 3.0 ಸರಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ಮಂಡನೆಗೆ ಸಿದ್ಧತೆ ನಡೆದಿದ್ದು, “ಆಯುಷ್ಮಾನ್ ಭಾರತ್’ ವಿಮೆ ಮೊತ್ತವನ್ನು ದುಪ್ಪಟ್ಟು ಅಂದರೆ 10 ಲಕ್ಷ ರೂ.ಗೆ ಹೆಚ್ಚಳದ ಘೋಷಣೆಯನ್ನು ನಿರೀಕ್ಷಿಸಲಾಗುತ್ತಿದೆ! ಜತೆಗೆ, 70 ವರ್ಷ ಮೇಲ್ಪಟ್ಟ ಎಲ್ಲರನ್ನೂ ವಿಮೆ ವ್ಯಾಪ್ತಿಗೆ ಸೇರಿಸುವ ಸಾಧ್ಯತೆಗಳೂ ಇವೆ.
ಆಯುಷ್ಮಾನ್ ವಿಮೆ ಮೊತ್ತವನ್ನು ದುಪ್ಪಟ್ಟು ಮಾಡಿದರೆ ಸರಕಾರದ ಖಜಾನೆಗೆ ವರ್ಷಕ್ಕೆ 12,076 ಕೋಟಿ ರೂ. ಹೊರೆ ಯಾಗಲಿದೆ. ಈ ಕುರಿತು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್‌ಎಚ್‌ಎ) ವರದಿ ಸಿದ್ಧಪಡಿಸಿದೆ. ಮುಂದಿನ 3 ವರ್ಷಗಳವರೆಗೆ ಆಯುಷ್ಮಾನ್ ಭಾರತ್ ಯೋಜನೆಯಡಿ ವಿಮೆ ಮೊತ್ತವನ್ನು ದುಪ್ಪಟ್ಟು ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದು ಜಾರಿಯಾದರೆ ದೇಶದ ಮೂರರ ಎರಡು ಭಾಗದಷ್ಟು ಜನರು ಯೋಜನೆಯ ವ್ಯಾಪ್ತಿಗೆ ಒಳಪಡಲಿದ್ದಾರೆ.

Laxmi News 24×7