Breaking News

ಚಿಕ್ಕೋಡಿ | ನಿರಂತರ ಸುರಿಯುತ್ತಿರುವ ಮಳೆ: ಪ್ರವಾಹ ಸಾಧ್ಯತೆ

Spread the love

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ನೆರೆಯ ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಕೃಷ್ಣಾ, ದೂಧಗಂಗಾ ಹಾಗೂ ವೇದಗಂಗಾ ನದಿಗಳಲ್ಲಿ ದಿನದಿಂದ ದಿನಕ್ಕೆ ನೀರು ಹರಿಯುವ ಪ್ರಮಾಣ ಹೆಚ್ಚಳವಾಗುತ್ತಿದೆ.

ಕೃಷ್ಣಾ ನದಿಗೆ ಅಡ್ಡಲಾಗಿರುವ ಕಲ್ಲೋಳ-ಯಡೂರು ಬ್ಯಾರೇಜ್ ಬಳಿಯಲ್ಲಿ ಬುಧವಾರ 26 ಸಾವಿರ ಕ್ಯುಸೆಕ್ ನಷ್ಟಿದ್ದ ನೀರು ಒಂದೇ ದಿನದಲ್ಲಿ 47 ಸಾವಿರ ಕ್ಯುಸೆಕ್ ಏರಿಕೆ ಕಂಡಿದೆ.

ಪ್ರವಾಹ ಉಂಟಾಗುವ ಸಾಧ್ಯತೆ ಹೆಚ್ಚಿವೆ. ಹೀಗಾಗಿ ಜಿಲ್ಲಾಡಳಿತ ಹಲವು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ.ಚಿಕ್ಕೋಡಿ | ನಿರಂತರ ಸುರಿಯುತ್ತಿರುವ ಮಳೆ: ಪ್ರವಾಹ ಸಾಧ್ಯತೆ

ಉಪ ವಿಭಾಗ ವ್ಯಾಪ್ತಿಯ ಕೃಷ್ಣಾ ನದಿಯಲ್ಲಿ 2 ಲಕ್ಷ ಕ್ಯುಸೆಕ್ ಗೂ ಹೆಚ್ಚು ನೀರು ಹರಿದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿದ್ದು, ಈಗಾಗಲೇ ಜಿಲ್ಲಾಡಳಿತ ಪ್ರವಾಹ ಪೀಡಿತ ಗ್ರಾಮಗಳನ್ನು ಗುರುತಿಸಿದೆ. ಅಥಣಿ ತಾಲ್ಲೂಕಿನ 21 ಪೂರ್ಣ, 3 ಭಾಗಶಃ, ಕಾಗವಾಡ ತಾಲ್ಲೂಕಿನಲ್ಲಿ 8 ಪೂರ್ಣ, 5 ಭಾಗಶಃ, ಚಿಕ್ಕೋಡಿ ತಾಲ್ಲೂಕಿನಲ್ಲಿ 5 ಪೂರ್ಣ, 6 ಭಾಗಶಃ, ರಾಯಬಾಗ ತಾಲ್ಲೂಕಿನಲ್ಲಿ 8 ಪೂರ್ಣ, 7 ಭಾಗಶಃ ತೊಂದರೆಗೊಳಗಾಗುವ ಗ್ರಾಮಗಳಾಗಿವೆ. ಇನ್ನು, ನಿಪ್ಪಾಣಿ ತಾಲ್ಲೂಕಿನಲ್ಲಿ ದೂಧಗಂಗಾ ಮತ್ತು ವೇದಗಂಗಾ ನದಿಯಲ್ಲಿ 50 ಸಾವಿರ ಕ್ಯುಸೆಕ್ ಗಿಂತ ಹೆಚ್ಚು ನೀರು ಹರಿದರೆ 13 ಹಾಗೂ 1 ಲಕ್ಷ ಕ್ಯುಸೆಕ್ ಗಿಂತ ಹೆಚ್ಚು ನೀರು ಹರಿದರೆ 10 ಗ್ರಾಮಗಳು ಬಾಧಿತವಾಗಲಿವೆ.

ಚಿಕ್ಕೋಡಿ ಉಪ ವಿಭಾಗದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದಲ್ಲಿ ಜನ ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಈಗಾಗಲೇ 135 ಕಾಳಜಿ ಕೇಂದ್ರ ಹಾಗೂ 135 ಗೋಶಾಲೆಗಳನ್ನು ಗುರುತಿಸಲಾಗಿದೆ. ಅಥಣಿ ತಾಲ್ಲೂಕಿನಲ್ಲಿ 22 ಕಾಳಜಿ ಕೇಂದ್ರ, 22
ಗೋಶಾಲೆ, ಚಿಕ್ಕೋಡಿ ತಾಲ್ಲೂಕಿನಲ್ಲಿ 45 ಕಾಳಜಿ ಕೇಂದ್ರ, 45 ಗೋಶಾಲೆ, ರಾಯಬಾಗ ತಾಲ್ಲೂಕಿನಲ್ಲಿ 40 ಕಾಳಜಿ ಕೇಂದ್ರ, 40 ಗೋಶಾಲೆ, ಕಾಗವಾಡ ತಾಲ್ಲೂಕಿನಲ್ಲಿ 17 ಕಾಳಜಿ ಕೇಂದ್ರ ಹಾಗೂ 17 ಗೋಶಾಲೆಗಳನ್ನು ಗುರುತಿಸಲಾಗಿದೆ.


Spread the love

About Laxminews 24x7

Check Also

ಸ್ನಾನದ ಕೋಣೆಯಲ್ಲಿ ಕಾಲು ಜಾರಿ ಬಿದ್ದು ಹಿರಿಯ ನಟ ಉಮೇಶ್ ಅಸ್ವಸ್ಥ, ಆಸ್ಪತ್ರೆಗೆ ದಾಖಲು

Spread the loveಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಎಂ.ಎಸ್‌.ಉಮೇಶ್‌ ಅವರು ಮನೆಯ ಸ್ನಾನದ ಕೋಣೆಯಲ್ಲಿ ಕಾಲು ಜಾರಿ ಬಿದ್ದು ಗಾಯಗೊಂಡಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ