ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಪವಿತ್ರಾಗೌಡಳನ್ನು ದರ್ಶನ್ ಪತ್ನಿ ಎಂದು ಉಲ್ಲೇಖಿಸದಂತೆ ನಗರ ಪೊಲೀಸ್ ಆಯುಕ್ತರಿಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಪತ್ರ ಬರೆದಿದ್ದಾರೆ.
ಈ ಕುರಿತು ಪತ್ರದಲ್ಲಿ ಉಲ್ಲೇಖಿಸಿರುವ ವಿಜಯಲಕ್ಷ್ಮೀ, ನಾನು ನಟ ದರ್ಶನ್ ಅವರನ್ನು ೨೦೦೩ ರಲ್ಲಿ ಮದುವೆಯಾಗಿದ್ದು, ನಮಗೆ ಓರ್ವ ಮಗನಿದ್ದಾನೆ.
ಆದರೆ ಸಂಜಯ್ ಸಿಂಗ್ ಎಂಬುವರ ಜೊತೆಗೆ ಪವಿತ್ರಾಗೌಡಳಿಗೆ ಮದುವೆಯಾಗಿದ್ದು, ಅವರಿಗೂ ಒಬ್ಬ ಮಗಳಿದ್ದಾಳೆ. ಆದರೆ ಆಯುಕ್ತರು ಪತ್ರಿಕಾಗೋಷ್ಠಿಯಲ್ಲಿ ದರ್ಶನ್ ಅವರ ಪತ್ನಿ ಪವಿತ್ರಾಗೌಡ ಅಂತ ಹೇಳಿದ್ದೀರಿ. ಹೀಗಾಗಿ ಪೊಲೀಸ್ ದಾಖಲೆಗಳಲ್ಲಿ ಪವಿತ್ರಾಗೌಡಳನ್ನು ದರ್ಶನ್ ಪತ್ನಿ ಎಂದು ಉಲ್ಲೇಖಿಸದಂತೆ ವಿಜಯಲಕ್ಷ್ಮೀ ಪತ್ರದ ಮೂಲಕ ಕೋರಿದ್ದಾರೆ.
Laxmi News 24×7