Breaking News

ಲೋನಾವಾಲಾ ದುರಂತ ; ಜಲಪಾತದಲ್ಲಿ ಕೊಚ್ಚಿ ಹೋಗಿದ್ದ ಐವರ ಮೃತದೇಹಗಳು ಪತ್ತೆ

Spread the love

ಮುಂಬೈ: ಭಾನುವಾರ ಮಹಾರಾಷ್ಟ್ರದ ಪುಣೆಯ ಲೋನಾವಾಲಾ ಪ್ರದೇಶದ ಭೂಶಿ ಅಣೆಕಟ್ಟಿನ ಹಿನ್ನೀರಿನ ಸಮೀಪವಿರುವ ಜಲಪಾತದಲ್ಲಿ ಕೊಚ್ಚಿ ಹೋಗಿದ್ದ ಐವರ ಮೃತದೇಹ ಪತ್ತೆಯಾಗಿದೆ.

ಭಾನುವಾರ ಮಧ್ಯಾಹ್ನ ಕುಟುಂಬವೊಂದು ವಿಹಾರಕ್ಕೆಂದು ಹೋಗಿದ್ದ ವೇಳೆ ಜಲಪಾತದಲ್ಲಿ ಕೊಚ್ಚಿ ಹೋಗಿದ್ದರು.

ಕೂಡಲೇ ಶೋಧ ಮತ್ತು ರಕ್ಷಣಾ ತಂಡಗಳು ಅಲ್ಲಿಗೆ ಧಾವಿಸಿ ನೀರಲ್ಲಿ ನಾಪತ್ತೆಯಾದವರಿಗಾಗಿ ಹುಡುಕಾಟ ಆರಂಭಿಸಿತ್ತು. ಮಹಿಳೆ ಮಗು ಸೇರಿ ಐವರ ಶವಗಳನ್ನು ರಕ್ಷಣಾ ಸಿಬ್ಬಂದಿ ಹೊರ ತೆಗೆದಿದ್ದಾರೆ.

BREAKING : ಲೋನಾವಾಲಾ ದುರಂತ ; ಜಲಪಾತದಲ್ಲಿ ಕೊಚ್ಚಿ ಹೋಗಿದ್ದ ಐವರ ಮೃತದೇಹಗಳು ಪತ್ತೆ |Video

ಹಡಪ್ಸರ್ ಪ್ರದೇಶದ ಅನ್ಸಾರಿ ಕುಟುಂಬದ ಸದಸ್ಯರು ಭೂಶಿ ಅಣೆಕಟ್ಟಿಗೆ ವಿಹಾರಕ್ಕೆ ಹೋಗಿದ್ದರು. ಅವರು ಅಣೆಕಟ್ಟಿನ ಸಮೀಪವಿರುವ ಜಲಪಾತವನ್ನು ನೋಡಲು ಹೋಗಿದ್ದು, ಆ ಪ್ರದೇಶದಲ್ಲಿ ತೀವ್ರವಾದ ಮಳೆಯಿಂದಾಗಿ ನೀರಿನ ಹರಿವು ಹೆಚ್ಚಾದಾಗ ಅವರ ಗಮನಕ್ಕೆ ಬರಲಿಲ್ಲ. ಹೀಗಾಗಿ ನೀರಲ್ಲಿ ಕೊಚ್ಚಿ ಹೋಗಿದ್ದಾರೆ. ಘಟನೆಯ ವಿಡಿಯೋ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.


Spread the love

About Laxminews 24x7

Check Also

ಶಾಸಕ ಕೆ.ಸಿ.ವೀರೇಂದ್ರ ಮತ್ತೆ 6 ದಿನ ಇ.ಡಿ ಕಸ್ಟಡಿಗೆ

Spread the love ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರ ಐದು ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ