ಬೆಂಗಳೂರು: ಮುಂದಿನ 3 ದಿನಗಳಲ್ಲಿ ಅಸುರಕ್ಷಿತ ಮಸಾಲಪೂರಿ ಹಾಗೂ ಪಾನಿಪೂರಿ ಮಾರಾಟ ವನ್ನು ರಾಜ್ಯಾದ್ಯಂತ ನಿಷೇಧ ಮಾಡಲಾಗುತ್ತದೆಯೇ? ಅಂಥದ್ದೊಂದು ತೂಗುಕತ್ತಿ ಈ ಮಸಾಲಾ ತಿಂಡಿಗಳ ಮೇಲಿದೆ. ಇದಕ್ಕೆ ಬಳಸುವ ಕೆಮಿಕಲ್ ಸಾಸ್ ಮಕ್ಕಳ ಜೀರ್ಣಾಂಗದ ಮೇಲೂ ಪರಿಣಾಮ ಬೀರಿ, ಹೈಪರ್ ಆಕ್ವಿವ್‌ನೆಸ್ ಗೆ ಕಾರಣವಾಗುತ್ತಿದೆ ಎಂಬ ಅಂಶ ಗೊತ್ತಾಗಿದೆ.
ರಾಜ್ಯದಲ್ಲಿ ಗೋಬಿ ಮಂಚೂರಿ, ಕಾಟನ್ ಕ್ಯಾಂಡಿಗಳಲ್ಲಿ ಆರೋಗ್ಯಕ್ಕೆ ಹಾನಿಕಾರಕ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಅಸುರಕ್ಷಿತ ಗೋಬಿ ಹಾಗೂ ಕಾಟನ್ ಕ್ಯಾಂಡಿಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಜೂ. 24ರಂದು ಕೃತಕ ಬಣ್ಣ ಬೆರೆಸಿ ಮಾಡುವ ವೆಜ್, ಫಿಶ್, ಚಿಕನ್ ಕಬಾಬ್ ಅನ್ನು ನಿಷೇಧಿಸಿದ ಬೆನ್ನಲ್ಲೇ ಅಸುರಕ್ಷಿತ ಪಾನಿಪೂರಿ ಹಾಗೂ ಮಸಾಲಪೂರಿ ನಿರ್ಬಂಧಕ್ಕೆ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಇಲಾಖೆ ಸಿದ್ಧವಾಗಿದೆ.