ಹಾವೇರಿ: ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭಗೊಂಡ ನಂತ್ರ, ಸರಿಯಾದ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಈ ಗ್ರಾಮದ ಜನರು ತಮ್ಮ ಊರಿನಲ್ಲಿ ಮಳೆ ಬರುತ್ತಿಲ್ಲ ಅನ್ನೋ ಕಾರಣಕ್ಕೆ ಹೂತಿದ್ದಂತ ಶವಗಳನ್ನೇ ಹೊರತೆಗೆದಿರುವಂತ ಶಾಕಿಂಗ್ ಸುದ್ದಿ ತಿಳಿದು ಬಂದಿದೆ.
ಹಾವೇರಿ ಜಿಲ್ಲೆಯ ಹಲವೆಡೆ ಮುಂಗಾರು ಮಳೆ ಆರಂಭಗೊಂಡ ನಂತ್ರವೂ ಸಮರ್ಪಕವಾಗಿ ಮಳೆಯಾಗಿರಲಿಲ್ಲ. ಇದಕ್ಕೆ ಕಾರಣ ಚರ್ಮ ರೋಗ(ತೊನ್ನು) ಇದ್ದಂತ ವ್ಯಕ್ತಿಯನ್ನು ಹೂತು ಹಾಕಿದ್ದೇ ಕಾರಣ ಎಂಬುದಾಗಿ ಹೇಳಲಾಗುತ್ತಿದೆ.
ಮೂಡನಂಬಿಕೆಗೆ ಜೋತು ಬಿದ್ದಂತ ಜನರು ಮಳೆ ಬರದೇ ಇರೋದಕ್ಕೆ ತೊನ್ನು ಖಾಯಿಲೆಯ ವ್ಯಕ್ತಿಯನ್ನು ಹೂತು ಹಾಕಿರೋದೇ ಕಾರಣ. ಇದೇ ಕಾರಣದಿಂದ ಮಳೆಯಾಗುತ್ತಿಲ್ಲ ಅಂತ ಜನರು ಹೂತಿದ್ದಂತ ಶವಗಳನ್ನು ಹೊರ ತೆಗೆದಿದ್ದಾರೆ. ಆ ಬಳಿಕ ಸುಟ್ಟು ಹಾಕಿದ್ದಾರೆ.
ಅಂದಹಾಗೇ ಈಗಾಗಲೇ ಚರ್ಮ ಖಾಯಿಲೆಯಿಂದ ಬಳಲಿ, ಸಾವನ್ನಪ್ಪಿದ್ದಂತ 8 ರಿಂದ 10 ಶವಗಳನ್ನು ಜನರು ಜಿಲ್ಲೆಯಲ್ಲಿ ಹೊರತೆಗೆದು, ಶವಗಳನ್ನು ಸುಟ್ಟು ಹಾಕಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ. ಈ ಎಲ್ಲಾ ಪೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾವೆ.