Breaking News

ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಮೋಸ: ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರೆಸ್ಟ್

Spread the love

ಶಿವಮೊಗ್ಗ: ಯುವತಿಗೆ ಮುದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಬಿಜೆಪಿ ಜಿಲ್ಲಾ ಪ್ರಧಾನಕಾರ್ಯದರ್ಶಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅರುಣ್ ಕುಗ್ವೆ ಬಂಧಿತ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ. ಶಿವಮೊಗ್ಗ ಮಹಿಳಾ ಠಾಣೆ ಪೊಲೀಸರು ಸಾಗರದ ನಿವಾಸದಲ್ಲಿ ಅರುಣ್ ಕುಗ್ವೆಯನ್ನು ಬಂಧಿಸಿದ್ದಾರೆ.

BIG NEWS: ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಮೋಸ: ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರೆಸ್ಟ್

ಸಂತ್ರಸ್ತ ಯುವತಿ ಮೊದಲು ಸಾಗರ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ ಕಾರಣಾಂತರಗಳಿಂದ ಆರೋಪಿ ಅರುಣ್ ವಿರುದ್ಧ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ಯುವತಿ ಶಿವಮೊಗ್ಗಕ್ಕೆ ಬಂದು ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಿಪಿಐ ಭರತ್ ಕುಮಾರ್ ನೇತೃತ್ವದ ತಂಡ ಅರುಣ್ ಕುಗ್ವೆಯನ್ನು ಬಂಧಿಸಿದೆ.

ಯುವತಿ ಮಾಡಿರುವ ಆರೋಪದ ಪ್ರಕಾರ ಅರುಣ್ ಕುಗ್ವೆ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ನಾಲ್ಕು ವರ್ಷಗಳಿಂದ ಸಂಬಂಧ ಬೆಳೆಸಿ, ಶಿವಮೊಗ್ಗ, ಜೋಗ ಸೇರಿದಂತೆ ಹಲವೆಡೆ ಸುತ್ತಾಡಿದ್ದಾನೆ. ಅಲ್ಲದೇ ಬಲವಂತವಾಗಿ ದೈಹಿಕವಾಗಿಯೂ ಸಂಬಂಧ ಬೆಳೆಸಿ, ಬಲಾತ್ಕಾರದ ವಿಡಿಯೋಗಳನ್ನು ಚಿತ್ರೀಕರಿಸಿಕೊಂಡಿದ್ದಾನೆ. ಮದುವೆಯಾಗುವುದಾಗಿ ಹೇಳಿ ನಂಬಿಸಿ ಈಗ ಬೇರೊಬ್ಬ ಯುವತಿ ಜೊತೆ ಇದೇ ರೀತಿ ವರ್ತಿಸುತ್ತಿದ್ದು, ಪ್ರಶ್ನಿಸಿದ್ದಕ್ಕೆ ಬೆದರಿಕೆ ಹಾಕಿದ್ದಾನೆ.


Spread the love

About Laxminews 24x7

Check Also

ಬಳ್ಳಾರಿ: ಪ್ರೀತಿಸಿದ್ದಕ್ಕೆ ಯುವಕನ ಕೊಲೆ; ಯುವತಿಯ ತಂದೆ, ಅಣ್ಣನ ಬಂಧನ

Spread the loveಬಳ್ಳಾರಿ: ಮಗಳನ್ನು ಪ್ರೀತಿಸದಂತೆ ಹಲವು ಬಾರಿ ಎಚ್ಚರಿಕೆ ನೀಡಿದರೂ ಪ್ರೀತಿಸುತ್ತಿದ್ದ ಯುವಕನನ್ನು ಹುಡುಗಿಯ ತಂದೆ ಹಾಗೂ ಅಣ್ಣ ಸೇರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ