ಯಾದಗಿರಿ: ಕ್ಷುಲ್ಲಕ ಕಾರಣಕ್ಕೆ ಅರಣ್ಯಾಧಿಕಾರಿಯನ್ನೇ ಹತ್ಯೆಗೈದಿರುವ ಪ್ರಕರಣ ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣದಲ್ಲಿ ನಡೆದಿದೆ.
ಮಹೇಶ್ ಕನಕಟ್ಟಿ ಕೊಲೆಯಾದ ಅರಣ್ಯಾಧಿಕಾರಿ. ಶಹಾಪುರ ಅರಣ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಮೊಟಗಿ ಬಾರ್ ಆಂದ್ ರೆಸ್ಟೋರೆಂಟ್ ನಲ್ಲಿ ನಡೆದಿದ್ದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕುಡಿದ ಮತ್ತಿನಲ್ಲಿ ಆರೋಪಿಗಳು ಕ್ಷುಲ್ಲಕ ಕಾರಣಕ್ಕೆ ಮಹೇಶ್ ಕನಕಟ್ಟಿ ಅವರನ್ನು ಕೊಲೆಗೈದಿದ್ದಾರೆ ಎನ್ನಲಾಗಿದೆ. ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ರಾಜು, ರೇಖು ನಾಯ್ಕ್, ತಾರಾ ಸಿಂಗ್, ನರಸಿಂಗ್ ಹಾಗೂ ಪ್ರಕಾಶ ಬಂಧಿತ ಆರೋಪಿಗಳು.
Laxmi News 24×7