ಉತ್ತರ ಕನ್ನಡ, ಜೂ.20: ರಾಜ್ಯ ಸರ್ಕಾರ(State government) ಪೆಟ್ರೋಲ್, ಡಿಸೇಲ್ ಮೇಲಿನ ತೆರಿಗೆ ಹೆಚ್ಚಳದಿಂದ ಪೆಟ್ರೋಲ್ ನೂರರ ಗಡಿ ದಾಟಿದೆ. ಇನ್ನು ಡಿಸೇಲ್ ಕೂಡ ಗೋವಾ ರಾಜ್ಯಕ್ಕಿಂತ ಹೆಚ್ಚಾಗಿದ್ದು, ವಾಹನ ಸವಾರರ ಜೇಬು ಬಿಸಿ ಮಾಡುತ್ತಿದೆ.
ಆದ್ರೆ, ಗೋವಾ ಗಡಿಗೆ ಹೊಂದಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಕಾರವಾರ(Karwar)ದಲ್ಲಿ ಸಸ್ತಾ ಗೋವಾ ಮದ್ಯದ ಜೊತೆ ಅತೀ ಕಡಿಮೆ ಬೆಲೆಯಲ್ಲಿ ಸಿಗುವ ಪೆಟ್ರೋಲ್ಗೆ ಮುಗಿ ಬೀಳುತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ಗೋವಾಕ್ಕೆ ಸಮೀಪವೇ ಇದ್ದು, ಕಾರವಾರದಿಂದ 15 ಕಿಲೋಮೀಟರ್ ಕ್ರಮಿಸಿದರೇ ಗೋವಾ ರಾಜ್ಯದ ಪೆಟ್ರೋಲ್ ಬಂಕ್ಗಳು ಸಿಗುತ್ತವೆ.
ಹೀಗಾಗಿ ಕಾರವಾರದ ಜನ ಇದೀಗ ಕರ್ನಾಟಕದಲ್ಲಿ ಪೆಟ್ರೋಲ್ ,ಡಿಸೇಲ್ ಹಾಕಿಸುವ ಬದಲು ನೇರ ಗೋವಾಕ್ಕೆ ತೆರಳಿ ಪೆಟ್ರೋಲ್, ಡಿಸೇಲ್ಗಳನ್ನು ವಾಹನಕ್ಕೆ ಟ್ಯಾಂಕ್ ಫುಲ್ ಮಾಡಿಸಿಕೊಂಡು, ಲೀಟರ್ ಗಟ್ಟಲೇ ಕ್ಯಾನ್ಗಳಲ್ಲಿ ತುಂಬಿಸಿಕೊಂಡು ಮರಳುತಿದ್ದಾರೆ. ಇದರಿಂದ ಗೋವಾ ಭಾಗದಲ್ಲಿರುವ ಪೆಟ್ರೋಲ್ ಬಂಕ್ಗಳಿಗೆ ಹೆಚ್ಚಿನ ಲಾಭವಾಗುತಿದ್ದು, ಭರ್ಜರಿ ವ್ಯಾಪಾರವಾಗುತ್ತಿದೆ.