ಮದ್ದೂರು: ಕೊಲೆ ಆರೋಪದಲ್ಲಿ ಬಂಧನವಾಗಿರುವ ನಟ ದರ್ಶನ್ ಹಾಗೂ ಅವರ ಗ್ಯಾಂಗ್‌ನ ಕೃತ್ಯಗಳು, ಪುಂಡಾಟ ಒಂದೊಂದಾಗಿಯೇ ಬೆಳಕಿಗೆ ಬರುತ್ತಿವೆ.
ದರ್ಶನ್ ಗ್ಯಾಂಗ್ ಕಾನ್‌ಸ್ಟೆಬಲ್ ಮೇಲೆಯೂ ಹಲ್ಲೆ ನಡೆಸಿತ್ತು ಎಂಬ ಆರೋಪ ಕೇಳಿಬಂದಿದೆ. ಮದ್ದೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಎಂ. ಉದಯ್ ಮನೆಯಲ್ಲೇ ಶಾಸಕರ ಗನ್‌ಮ್ಯಾನ್ ಆಗಿದ್ದ ಡಿಎಆರ್ ಕಾನ್‌ಸ್ಟೆಬಲ್ ನಾಗೇಶ್ ಮೇಲೆ ದರ್ಶನ್ ಕಡೆಯವರು ಹಲ್ಲೆ ನಡೆಸಿದ್ದರು ಎನ್ನಲಾಗಿದೆ.
ಎ. 27ರಂದು ಲೋಕಸಭಾ ಚುನಾವಣೆ ಹಿನ್ನೆಲೆ ಮದ್ದೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ದರ್ಶನ್ ಕ್ಯಾಂಪೇನ್ ನಡೆಸಿದ್ದರು. ಮುಖಂಡರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುವ ವಿಚಾರಕ್ಕೆ ದರ್ಶನ್ ಖಾಸಗಿ ಭದ್ರತಾ ಪಡೆಯಲ್ಲಿದ್ದ ಲಕ್ಷ್ಮಣ್, ನಾಗರಾಜು ಇತರರು ಗಲಾಟೆ ಮಾಡಿದ್ದರು.