ಯರಗಟ್ಟಿ: ‘ಮಹಿಳೆಯರು ಸ್ವಂತ ಉದ್ಯೋಗ ಮಾಡಲು ತರಬೇತಿ ನೀಡುವ ಜೊತೆಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಸಹಕಾರಿಯಾಗಿದೆ’ ಎಂದು ಹೋಟೆಲ್ ಉದ್ಯಮಿ ರಾಜು ಶೆಟ್ಟಿ ಹೇಳಿದರು.
ಪಟ್ಟಣದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ವೀಲ್ ಚೇರ್ ಮತ್ತು ವಾಟರ್ ಬೆಡ್ ವಿತರಿಸಿ ಅವರು ಮಾತನಾಡಿದರು.
ಸಂಸ್ಥೆಯ ಜಿಲ್ಲಾ ನಿರ್ದೇಶಕ ಲವಕುಮಾರ ಮಾತನಾಡಿ, ‘ಸಂಸ್ಥೆ ಮಹಿಳೆಯರ ಅಭಿವೃದ್ಧಿ ಜೊತೆಗೆ ಕುಟಂಬದ ಪ್ರಗತಿಗೂ ಹಲವು ಯೋಜನೆ ರೂಪಿಸುತ್ತಿದೆ. ಮಹಿಳೆ ಹಾಗೂ ಪುರುಷರು ಒಟ್ಟಾಗಿ ಸಂಸ್ಥೆಯ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.
ಸಂಸ್ಥೆಯ ಡಿ. ಸತೀಶ್, ನಾಗೇಶ ನಾಯ್ಕ, ಧಾರವಾಡ ಪ್ರಾದೇಶಿಕ ಕಚೇರಿ ಯೋಜನಾಧಿಕಾರಿ ಆರತಿ, ಕಿಟ್ಟು ತೋರಗಲ್ಲ ಹಾಗೂ ಇತರರು ಇದ್ದರು.