ರಾಯಬಾಗ: ಕೆರೆ-ಕೊಳ್ಳಗಳು ಭರ್ತಿಯಾದರೆ ಅಂತರ್ಜಲ ಮಟ್ಟದಲ್ಲಿ ಏರಿಕೆಯಾಗಿ ಜನರಿಗೆ ನೀರಿನ ಬವಣೆ ತಪ್ಪುತ್ತದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೋಹಿತೆ ಹೇಳಿದರು.
ತಾಲ್ಲೂಕಿನ ನಂದಿಕುರಳಿ ಗ್ರಾಮದಲ್ಲಿ ಕೆರೆಗೆ ಬಾಗಿನ ಅರ್ಪಣೆ ಮಾಡಿ ಅವರು ಮಾತನಾಡಿದರು.
ಶಿವನಗೌಡ ಪಾಟೀಲ ಮಾತನಾಡಿ, ‘ವರುಣನ ಕೃಪಾ ಕಟಾಕ್ಷದಿಂದ ಮಳೆ ಬಂದು ಹಲವಾರು ಕೆರೆ, ಕಟ್ಟೆಗಳಿಗೆ ನೀರು ಅಲ್ಪ ಸ್ವಲ್ಪ ಬಂದಿದೆ. ಹಳ್ಳ ಕೊಳ್ಳಗಳು ಹರಿದಿರುವುದರಿಂದ ಕುಡಿಯುವ ನೀರಿನ ಅಭಾವ ತಪ್ಪಿದಂತಾಗಿದೆ. ದನ ಕರುಗಳಿಗೆ ಮೇವಿನ ಕೊರತೆ ನೀಗಿದಂತಾಗಿದೆ. ಸಚಿವ ಸತೀಶ ಜಾರಕಿಹೊಳಿ ಅವರು ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ’ ಎಂದರು.
Laxmi News 24×7